ಸಾಹಿತ್ಯದ ಮೂಲಮಂತ್ರ ಜನಪದ

Ramakrishna
Published on

ಲಕ್ಷ್ಮೇಶ್ವರ: ಜನಪದ ಕನ್ನಡ ಸಾಹಿತ್ಯ ಮೇರು ಶಿಖರ ಮತ್ತು ಸಾಹಿತ್ಯದ ಮೂಲಮಂತ್ರ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.

ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಶುಕ್ರವಾರ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಜನಪದ ಸಾಹಿತ್ಯ ಬದುಕಿನ ಮೂಲಮಂತ್ರವೇ ಆಗಿದೆ. ಮನೆಯೇ ಮೊದಲ ಪಾಠಶಾಲೆ-ತಾಯಿಯೇ ಮೊದಲ ಗುರು ಎನ್ನುವಂತೆ ತಾಯಿ ತನ್ನ ಮಗು ತೊಟ್ಟಿಲಲ್ಲಿದ್ದಾಗಲೇ ಲಾಲಿ ಹಾಡುಗಳ ಮೂಲಕ ಮೌಲ್ಯಗಳನ್ನು ತಿಳಿಸುತ್ತಾಳೆ. ಜಾನಪದ ಶೈಲಿಯ ಬೀಸುವ, ಕುಟ್ಟುವ, ಒಕ್ಕಲು ಮಾಡುವ, ಮಗಳನ್ನು ಗಂಡನ ಮನೆಗೆ ಕಳುಹಿಸುವಾಗ, ಮಕ್ಕಳಿಗೆ ಹೆಸರಿಡುವಾಗ, ಮದುವೆ, ಜಾತ್ರೆ, ಹಬ್ಬ ಹರಿದಿನ ಸೇರಿ ಜೀವನದ ಪ್ರತಿ ಹಂತದಲ್ಲೂ ಜಾನಪದ ಹಾಡು, ಸಾಹಿತ್ಯದ ಮೂಲಕ ಬದುಕಿನ ಮೌಲ್ಯಗಳನ್ನು ಸಾರಿ ಹೇಳಲಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣ ಸಾಹಿತ್ಯ ಪರಿಷತ್ತಿನ ತಾಲೂಕ ಅಧ್ಯಕ್ಷ ಎಲ್.ಎಸ್ ಅರಳಹಳ್ಳಿ ವಹಿಸಿದ್ದರು. ಡಾ.ಶಿವಾನಂದ ಹೂವಿನ, ಮಹಾಂತೇಶ ದಶಮನಿ, ಶೇಖಪ್ಪ ಗೊಜಗೋಜಿ, ಪೂರ್ಣಜಿ ಖರಾಟೆ, ಸಿ.ಜಿ ಹಿರೇಮಠ, ಗಂಗಾಧರ ಅರಳಿ, ಶರಣಪ್ಪ ಗುಳಗಣ್ಣನವರ, ಮಹಾಬಳೇಶ್ವರಪ್ಪ ಬೇವಿನ ಮರದ, ಬಸವರಾಜ ಸಂಗಪ್ಪಶೆಟ್ಟರ, ರತ್ನಾ ಕರ್ಕಿ, ಪ್ರತಿಮಾ ಮಹಾಜನಶೆಟ್ಟರ, ನಿರ್ಮಲಾ ಅರಳಿ. ಶಾರದಾ ಮಹಾಂತಶೆಟ್ಟರ, ಶೋಭಾ ಗಾಂಜಿ, ಅರುಂಧತಿ ಬಿಂಕದಕಟ್ಟಿ, ಮಹಾಂನಂದ ಕೊಣ್ಣೂರ, ಲತಾ ತಟ್ಟಿ ಸೇರಿ ಅಕ್ಕಳ ಬಳಗದ ಸದಸ್ಯರು ಇದ್ದರು. ನಿರ್ಮಲಾ ಅಡವಿ, ಗೌರಿ ಸಂಗಪ್ಪಶೆಟ್ಟರ,ಈರಣ್ಣ ಹೂಗಾರ, ಮಂಗಲಾ ಹಸರೆಡ್ಡಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net