

ಪಾಂಡವಪುರ: ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದ ಬಳಿ ಸಂಸ್ಥೆ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ 80 ಟನ್ ಸಾಮರ್ಥ್ಯದ ವೇ-ಬ್ರಿಡ್ಜ್‌ಅನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೋಮವಾರ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ಟಿಎಪಿಸಿಎಂಎಸ್ ಆಡಳಿತ ಮಂಡಳಿ ಪದಾಕಾರಿಗಳು ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅನೇಕ ಶ್ಲಾಘನೀಯ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಸಂಸ್ಥೆ ವತಿಯಿಂದ ವೇ-ಬ್ರಿಡ್ಜ್ ತೆರೆಯಬೇಕು ಎಂಬುದು ರೈತರ ಬಹಳ ದಿನಗಳ ಬೇಡಿಕೆಯಾಗಿತ್ತು. ಅದರಂತೆ ಶಾಸಕರನ್ನು ಕರೆಯಿಸಿ ವೇ-ಬ್ರಿಡ್ಜ್ ಅನ್ನು ಉದ್ಘಾಟಿಸಲಾಗಿದೆ. ಇದರಿಂದ ವ್ಯಾಪಾರಸ್ಥರು ಮತ್ತು ರೈತರು ಕಬ್ಬು ಇತರ ಬೆಳೆಗಳನ್ನು ತೂಕ ಮಾಡಿಸಲು ಅನುಕೂಲವಾಗಿದೆ ಎಂದು ಹೇಳಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ನಿರ್ದೇಶಕರಾದ ಕ್ಯಾತನಹಳ್ಳಿ ಎಸ್.ದಯಾನಂದ್, ಕನಗನಹಳ್ಳಿ ರಾಮಕೃಷ್ಣೇಗೌಡ, ಚಿಕ್ಕಾಡೆ ಶ್ರೀಕಾಂತ್, ಮುಖಂಡರಾದ ಎಸ್.ಎ.ಮಲ್ಲೇಶ್, ಎಂ.ಗಿರೀಶ್, ಹೋರಾಟಗಾರ ಹಾರೋಹಳ್ಳಿ ನಾರಾಯಣಗೌಡ, ಎಪಿಎಂಸಿ ಸ್ವಾಮಿಗೌಡ ಇತರರು ಇದ್ದರು.