ಬೇಲೂರಿನಲ್ಲಿ ನೀರಿನ ತೊಟ್ಟಿ ಉದ್ಘಾಟನೆ

13blrp2
Published on

ಹಾಸನ: ಬೇಸಿಗೆ ಕಾಲ ಹಿನ್ನೆಲೆಯಲ್ಲಿ ಪ್ರಾಣಿ-ಪಕ್ಷಿಗಳು ನೀರು ಕುಡಿಯಲು 247 ಸಮಾಜ ಸೇವಾ ತಂಡ ಹಾಗೂ ಹಸಿರು ಭೂಮಿ ಪ್ರತಿಷ್ಠಾನದಿಂದ ಬೇಲೂರು ಪಟ್ಟಣದ ಜೆಪಿ ನಗರದ ವೃತ್ತದಲ್ಲಿ ಇಟ್ಟಿರುವ ನೀರಿನ ತೊಟ್ಟಿಯನ್ನು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ನೀರು ಹಾಕುವ ಮೂಲಕ ಉದ್ಘಾಟಿಸಿದರು.

ಬೇಸಿಗೆ ಪ್ರಾರಂಭವಾಗಿರುವುದರಿಂದ ಪ್ರಾಣಿ-ಪಕ್ಷಿಗಳು ಕುಡಿಯುವ ನೀರಿಗೆ ತೊಂದರೆ ಅನುಭವಿಸಬಾರದೆಂದು ನಮ್ಮ ಹಸಿರು ಭೂಮಿ ಪ್ರತಿಷ್ಠಾನ ಹಾಗೂ 247 ಸಮಾಜ ಸೇವಾ ತಂಡ ಪಟ್ಟಣದ ಜೆಪಿ ನಗರದ ವೃತ್ತದಲ್ಲಿ ನೀರಿನ ತೊಟ್ಟಿಯನ್ನಿಟ್ಟಿರುವುದು ಶ್ಲಾಘನೀಯ.

ಸಾರ್ವಜನಿಕರು ಸಹ ತಮ್ಮ ಮನೆ ಅಕ್ಕಪಕ್ಕ ವಾಸಿಸುವ ಪಕ್ಷಿ ಸಂಕುಲಗಳ ಉಳಿವಿಗಾಗಿ ಮನೆಗಳ ಮೇಲೆ ಬಟ್ಟಲು ಅಥವಾ ಜಗ್ಗುಗಳಲ್ಲಿ ನೀರನ್ನು ಇಡಬೇಕು ಎಂದು ಹೇಳಿದರು. ಕಸಾಪ ತಾಲೂಕು ಅಧ್ಯಕ್ಷ ರಾಜೇಗೌಡ, ಮಾಜಿ ಅಧ್ಯಕ್ಷ ಮ.ಶಿವಮೂರ್ತಿ, ಶಿಕ್ಷಕರಾದ ಕುಮಾರಸ್ವಾಮಿ, ಸಂಪತ್, ಪುರಸಭೆ ಸದಸ್ಯ ಫಯಾಜ್, ಎಕ್ಸಲೆಂಟ್ ಟ್ರೇಡರ್ಸ್ ಮಾಲೀಕ ಸಾದಾತ್, ಜಯರಾಮ್, ಕೀರ್ತಿ ಬಿ.ಸುನಿಲ್, ಸಾಮಾಜಿಕ ಕಾರ್ಯಕರ್ತ ನೂರ್ ಅಹಮದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net