

ಕಡಬ: ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘ ವತಿಯಿಂದ ಪ್ರಾರಂಭವಾದ ನೂತನ ಸ್ವ-ಸಹಾಯ ಸಂಘಗಳ ಉದ್ಘಾಟನೆ ನೂಜಿಬಾಳ್ತಿಲದಲ್ಲಿ ಇತ್ತೀಚೆಗೆ ನಡೆಯಿತು.
ನೂಜಿಬಾಳ್ತಿಲ ಗ್ರಾಮದ ಸಾಂತ್ಯಡ್ಕ, ಅರಿಮಜಲು, ನಿಡ್ಡೋ ಬೈಲಿನ, ಸುವಾರು 20 ಸದಸ್ಯರ ತಂಡದ ಶಿವಗೌರಿ ಮತ್ತು ಶಿವಗಂಗಾ ಎಂಬ ಸ್ವ-ಸಹಾಯ ಸಂಘಗಳನ್ನು ಉದ್ಯಮಿ ದುರ್ಗಾಪ್ರಸಾದ್ ಕೆ.ಪಿ. ಮನೆಯಲ್ಲಿ ಉದ್ಘಾಟಿಸಲಾಯಿತು.
ಒಕ್ಕಲಿಗ ಗೌಡ ಸೇವಾ ಸಂಘ ನಿರ್ದೇಶಕ ಚಂದ್ರಶೇಖರ ಗೌಡ ಕೋಡಿಬೈಲು ಉದ್ಟಾಟಿಸಿದರು. ಊರ ಗೌಡ ಸದಾನಂದ ಗೌಡ ಸಾಂತ್ಯಡ್ಕ ಸಭಾ ಅಧ್ಯಕ್ಷತೆ ವಹಿಸಿದ್ದರು. ಕಡಬ ಸ್ಪಂದನಾ ಸಮುದಾಯ ಸಹಕಾರ ಸಂಘ ಅಧ್ಯಕ್ಷ ಕೇಶವ ಅಮೈ, ಮಾತೃ ಸಂಘ ನಿರ್ದೇಶಕ ಪ್ರವೀಣ್ ಕುಂಟ್ಯಾನ ಶುಭಹಾರೈಸಿದರು. ಮಾತೃ ಸಂಘ ನಿರ್ದೇಶಕ ರಾಧಾಕೃಷ್ಣ ಕೆರ್ನಡ್ಕ, ಮಹಿಳಾ ಘಟಕ ಅಧ್ಯಕ್ಷೆ ವೀಣಾ ಕೊಲ್ಲೆಸಾಗು, ಗ್ರಾಮ ಉಸ್ತುವಾರಿಗಳಾದ ಲಿಂಗಪ್ಪ ಗೌಡ ಕಾಣದಬಾಗಿಲು, ಅಡೆಂಜ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನ ಮೊಕ್ತೇಸರ ರಾಧಾಕೃಷ್ಣ ಗೌಡ ಅಡೆಂಜ, ನೂಜಿಬಾಳ್ತಿಲ ಗ್ರಾ.ಪಂ. ಉಪಾಧ್ಯಕ್ಷ ಚಂದ್ರಶೇಖರ ಹಳೆನೂಜಿ, ಸದಸ್ಯೆ ವಿನಯ ಬಳಕ್ಕ ಮತ್ತಿತರರಿದ್ದರು. ಸಂಘ ವ್ಯವಸ್ಥಾಪಕ ಅಶೋಕ್ ಶೇಡಿ ಪ್ರಸ್ತಾವನೆಗೈದರು. ದುರ್ಗಾಪ್ರಸಾದ್ ಕೆ.ಪಿ. ಸ್ವಾಗತಿಸಿದರು. ಗ್ರಾಮ ಸಮಿತಿ ಕಾರ್ಯದರ್ಶಿ ಜಯಪ್ರಕಾಶ್ ಪೆತ್ತಲ ವಂದಿಸಿದರು. ಸ್ವ-ಸಹಾಯ ಸಂಘ ಪ್ರೇರಕ ಜನಾರ್ದನ ಪಾಡ್ಲ ನಿರೂಪಿಸಿದರು.