ವಿವೇಕ ಕೊಠಡಿ ಉದ್ಘಾಟನೆ

CHITRAGI
Published on

ಕುಮಟಾ: ಪಟ್ಟಣದ ಚಿತ್ರಗಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 13.90 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ವಿವೇಕ ಕೊಠಡಿಯನ್ನು ಶಾಸಕ ದಿನಕರ ಶೆಟ್ಟಿ ಮಂಗಳವಾರ ಉದ್ಘಾಟಿಸಿದರು.

ಬಿಇಒ ಆರ್.ಎಲ್. ಭಟ್, ಪುರಸಭೆ ಸದಸ್ಯರಾದ ಸಂತೋಷ ನಾಯ್ಕ, ಸುಮತಿ ಭಟ್, ಅಭಿ ಚಂದ್ರಹಾಸ ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ಭಟ್, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಂಜುನಾಥ ಪಟಗಾರ, ಮುಖ್ಯಶಿಕ್ಷಕ ಪಾಂಡುರಂಗ ಹುಲಸ್ವಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net