ವಿಶ್ವಕರ್ಮ ಕಲೆ ಜಗತ್ತಿಗೆ ಮಾದರಿ

oplus_2
ಹುಲಸೂರಿನಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ದೊಡೇಂದ್ರ ಸ್ವಾಮೀಜಿ, ಅಶೋಕ ಪೊz್ದÁರ, ಸುಲೋಚನಾ ವಿಶ್ವಕರ್ಮ, ಲತಾ ಹಾರಕೂಡೆ, ಸುಧೀರ ಕಾಡಾದಿ, ಮಲ್ಲಪ್ಪ ಧಬಾಲೆ ಇತರರಿದ್ದರು.
Published on

ಹುಲಸೂರು: ವಿಶ್ವಕ್ಕೆ ವಿಶ್ವಕರ್ಮ ಸಮಾಜ ನೀಡಿದ ಕೊಡುಗೆ ಅಪಾರವಾಗಿದೆ. ಅವರ ಕಲೆಗಳು ವಿಶ್ವಕ್ಕೆ ಮಾದರಿ ಆಗಿವೆ ಎಂದು ಶ್ರೀ ಡಾ.ಶಿವಾನಂದ ಸ್ವಾಮೀಜಿ ನುಡಿದರು.

ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಾಸ್ಥಾನದ ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಬೆಂಗಳೂರು, ಜಿಲ್ಲಾ ಘಟಕ ಬೀದರ್ ಹಾಗೂ ತಾಲೂಕು ಘಟಕದಿಂದ ಭಾನುವಾರ ಏರ್ಪಡಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ವಿಶ್ವಕರ್ಮರಿಗೆ ಕಲೆ ಸಂಸ್ಕೃತಿ ಹುಟ್ಟಿನಿಂದಲೇ ಬಂದಿದ್ದು, ವಿಶ್ವದ ಹಲವು ಕಡೆ ಗುಡಿ, ಗುಂಡಾರಗಳಲ್ಲಿ ಶಿಲ್ಪಕಲೆ, ಕಲಾಕೃತಿ ಹಾಗೂ ಹಲವು ದೇವರುಗಳ ಮೂರ್ತಿಗಳು ವಿಶ್ವಕರ್ಮದ ಕಲಾವಿದರು ನಿರ್ಮಿಸಿದ್ದು ಇಂದಿಗೂ ಅತ್ಯುತ್ತಮ ಕಲೆಗೆ ನಿದರ್ಶನಗಳಾಗಿವೆ ಎಂದು ಹೇಳಿದರು.

ಬೀದರ್ ಹಾಗೂ ಸುಲೆಪೇಟ್‌ನ ಶ್ರೀ ದೊಡೇಂದ್ರ ಸ್ವಾಮೀಜಿ ಮಾತನಾಡಿ, ವಿಶ್ವಕರ್ಮ ಸಮಾಜ ರೈತರಿಗಾಗಿ ಬಳಸುವ ಪರಿಕರಗಳನ್ನು ತಯಾರಿಸುವ ತಂತ್ರಜ್ಞರು. ಬೀದರ್ ಜಿಲ್ಲೆಯಲ್ಲಿ ವಿಶ್ವಕರ್ಮ ಸಮಾಜದವರು ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಸಮಾಜವಾಗಿದೆ. ಎಲ್ಲ ಸಮಾಜದವರು ನಮ್ಮವರೇ ಎನ್ನುವ ಭಾವನೆ ಎಲ್ಲರಲ್ಲೂ ಬೆಳೆಯಬೇಕು ಎಂದು ಹೇಳಿದರು.

ಜಿಪಂ ಮಾಜಿ ಉಪಾಧ್ಯಕ್ಷೆ ಲತಾ ಹಾರಕೂಡೆ, ಜಿಪಂ ಮಾಜಿ ಸದಸ್ಯರಾದ ಮಲ್ಲಿಕಾರ್ಜುನ ಧಬಾಲೆ, ಸುಧೀರ ಕಾಡಾದಿ, ಪ್ರೊ.ಆಕಾಶ ಖಂಡಾಳೆ, ಗೋವಿಂದರಾವ ಸೋಮೊವಂಶಿ, ನಾಗರಾಜ ಹಾವಣ್ಣ, ಅಶೋಕ ಪೋದ್ದಾರ, ದತ್ತಾತ್ರಿ ವಿಶ್ವಕರ್ಮ ಹಿಳಗಾಂವ, ಪ್ರಶಾಂತ ವಿಶ್ವಕರ್ಮ, ಸುಲೋಚನಾ ವಿಶ್ವಕರ್ಮ, ಸುದರ್ಶನ ವಿಶ್ವಕರ್ಮ ಮಾತನಾಡಿದರು.

ಗ್ರಾಪಂ ಉಪಾಧ್ಯಕ್ಷೆ ಸರಸ್ವತಿ ಬಾಲಕುಂದೆ, ಪ್ರಮುಖರಾದ ಕೆ.ಕೆ ಪಾರಶೆಟ್ಟಿ, ವಿದ್ಯಾವಾನ ಪಂಚಾಳ, ಚಂದ್ರಕಾಂತ ದೇಟ್ನೆ, ಬಂಡುರಾವ ಪಾಟೀಲ್, ರಾಜಕುಮಾರ ಹೊನ್ನಾಡೆ, ಶಿವರಾಜ ಖಪಲೆ, ಧರ್ಮೇಂದ್ರ ಭೋಸಲೆ, ಪ್ರವೀಣ ಸೂರ್ಯವಂಶಿ, ಧನ್ನಾಜಿ ಸೂರ್ಯವಂಶಿ, ವೀರೇಶ ವಿಶ್ವಕರ್ಮ, ಶಿವಕುಮಾರ ವಿಶ್ವಕರ್ಮ, ಪ್ರಶಾಂತ ವಿಶ್ವಕರ್ಮ, ಚಂದ್ರಶೇಖರ ವಿಶ್ವಕರ್ಮ ಇತರರಿದ್ದರು.

ಎಂ.ಬಿ.ಪಂಚಾಳ ಸ್ವಾಗತಿಸಿದರು. ರೂಪೇಶ ಪಂಚಾಳ ನಿರೂಪಣೆ ಮಾಡಿದರು. ವಾಸು, ನವೋದಯ ಆಕಾಡೆಮಿ ಮಕ್ಕಳಿಂದ ನಡೆದ ನೃತ್ಯ ನೋಡಿಗರ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net