ವಾಸರಕುದ್ರಿಗೆ ಗ್ರಾಮ ಪಂಚಾಯಿತಿ ಕಟ್ಟಡ ಲೋಕಾರ್ಪಣೆ

SAIL
Published on

ಅಂಕೋಲಾ: ಯಾರು ಎಷ್ಟೇ ದೊಡ್ಡ ಪೂಜೆ ಮಾಡಿದರೂ ದೇವರಿಗೆ ಕೇಳಿಸುವುದು ಸ್ವಚ್ಛಮನಸಿನಿಂದ ಮಾಡಿದ ಪ್ರಾರ್ಥನೆ ಅಷ್ಟೇ. ಅದನ್ನೇ ದೇವಾನುದೇವತೆಗಳು ಅನುಗ್ರಹಿಸುತ್ತಾರೆ. ಆದ್ದರಿಂದ ನಾನು ಹೆದರುವುದು ದೇವರಿಗೆ ಮಾತ್ರ ಎಂದು ಶಾಸಕ ಸತೀಶ್ ಸೈಲ್ ಹೇಳಿದರು.

ತಾಲೂಕಿನ ವಾಸರಕುದ್ರಿಗೆ ಗ್ರಾಮ ಪಂಚಾಯಿತಿ ನೂತನ ಕಟ್ಟಡ, ಅರಿವು ಕೇಂದ್ರ ಹಾಗೂ ಕಸವಿಲೇವಾರಿ ಘಟಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಶಿರೂರು ಘಟನೆಯಿಂದ ಸಂಪೂರ್ಣ ಸ್ಥಗಿತಗೊಂಡಿದ್ದ ರಾಷ್ಟ್ರೀಯ ಹೆದ್ದಾರಿಯಿಂದ ಅನೇಕರಿಗೆ ಸಮಸ್ಯೆ ಉಂಟಾಗಿತ್ತು, ಆದರೆ, ವಾಸರ ಕುದ್ರಿಗೆಯ ಜನ ತಮ್ಮ ಊರಿನ ರಸ್ತೆಯನ್ನು ಬಿಟ್ಟುಕೊಟ್ಟು ಮಾನವೀಯತೆ ಮೆರೆದಿದ್ದಾರೆ ಎಂದರು.

ವಾಸರ ಕುದ್ರಿಗೆ ಗ್ರಾಪಂ ಅಧ್ಯಕ್ಷ ಪ್ರದೀಪ ವಾಸರೆ ಮಾತನಾಡಿ, ‘ಈ ಹಿಂದಿನ ಅವಧಿಯಲ್ಲಿ ಅನುದಾನ ನೀಡಿದ ಶಾಸಕ ಸತೀಶ ಸೈಲ್ ಅವರ ವಿಶೇಷ ಕಾಳಜಿಯಿಂದಾಗಿ ಭವ್ಯ ಕಟ್ಟಡ ಇಂದು ಲೋಕಾರ್ಪಣೆಗೊಂಡಿದೆ’ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ, ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಗಾಂವಕರ, ಜಿಪಂ ಉಪ ವಿಬಾಗದ ಎಇಇ ರಾಮು ಗುನಗಿ, ತಾಪಂ ಇಒ ಸುನೀಲ ಎಂ, ಮಂಜೇಶ್ವರ ನಾಯಕ, ಪಾಂಡುರಂಗ ಗೌಡ, ನಾಗಮ್ಮ ಗೌಡ, ದಯಾನಂದ ನಾಯಕ, ಸುಬ್ರಾಯ ಗೌಡ, ಅರ್ಚನಾ ನಾಯಕ, ದೀಪಾ ಆಗೇರ, ಬೇಬಿ ಆಗೇರ ಇತರರಿದ್ದರು. ಪಿಡಿಒ ಸಹನಾ ನಾಯಕ ಸ್ವಾಗತಿಸಿದರು. ವರದಿಗಾರ ಸುಭಾಶ ಕಾರೇಬೈಲ್, ಶಿಕ್ಷಕ ಪ್ರಶಾಂತ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net