ಬನ್ನೂರಿನಲ್ಲಿ ವಿದ್ಯಾಶ್ರಮ ಲರ್ನಿಂಗ್ ಅಕಾಡೆಮಿ ಉದ್ಘಾಟನೆ

4 bannur 1
ಬನ್ನೂರಿನಲ್ಲಿ ವಿದ್ಯಾಶ್ರಮ ಲರ್ನಿಂಗ್ ಅಕಾಡೆಮಿಯನ್ನು ವಿವೇಕಾನಂದ ಶಿಕ್ಷಣ ಸಂಸ್ಥೆಯ ಧರ್ಮದರ್ಶಿ ಎಂ.ಪ್ರಕಾಶ್ ಉದ್ಘಾಟಿಸಿದರು. ಬಿ.ಎಸ್.ಯೋಗೇಂದ್ರ, ಹನುಮಂತೇಗೌಡ, ಬಿ.ಸಿ.ಪಾರ್ಥಸಾರಥಿ. ಡಾ.ಮಹೇಂದ್ರಸಿಂಗ್ ಕಾಳಪ್ಪ, ರಮೇಶ್, ಬಸವನಹಳ್ಳಿ ರಾಜು ಇದ್ದರು.
Published on

ಬನ್ನೂರು: ಗ್ರಾಮಾಂತರ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗಲಿ ಎಂಬ ಉದ್ದೇಶದೊಂದಿಗೆ ನುರಿತ ಶಿಕ್ಷಕರ ಸಹಕಾರದೊಂದಿಗೆ ಬನ್ನೂರಿನಲ್ಲಿ ವಿದ್ಯಾಶ್ರಮ ಲರ್ನಿಂಗ್ ಅಕಾಡೆಮಿ ತೆರೆಯಲಾಗಿದೆ ಎಂದು ಅಕಾಡೆಮಿಯ ಬಿ.ಎಸ್.ಯೋಗೇಂದ್ರ ತಿಳಿಸಿದರು.

ಪಟ್ಟಣದ ಎಂ.ಎಂ.ರಸ್ತೆಯಲ್ಲಿ ವಿದ್ಯಾಶ್ರಮ ಲರ್ನಿಂಗ್ ಅಕಾಡೆಮಿಯನ್ನು ವಿವೇಕಾನಂದ ಶಿಕ್ಷಣ ಸಂಸ್ಥೆ ಧರ್ಮದರ್ಶಿ ಎಂ.ಪ್ರಕಾಶ್ ಗುರುವಾರ ಉದ್ಘಾಟಿಸಿ ಮಾತನಾಡಿ, ಇಂದು ಸ್ಪರ್ಧಾತ್ಮಕ ಯುಗವಾಗಿದ್ದು, ಪ್ರತಿ ಕ್ಷಣ ಕಲಿಯುವಂತ ವಿಚಾರಗಳು ಬಹಳಿಷ್ಟಿವೆ. ಗ್ರಾಮಾಂತರ ಪ್ರದೇಶ ಮಕ್ಕಳು ಇಂತಹ ಕಲಿಕೆಯಿಂದ ವಂಚಿತರಾಗಿದ್ದನ್ನು ಗಮನಿಸಿ, ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ನೀಡುವಂತ ನಿಟ್ಟಿನಲ್ಲಿ ಈ ವಿದ್ಯಾಶ್ರಮ ಲರ್ನಿಂಗ್ ಅಕಾಡೆಮಿಯನ್ನು ತೆರೆಯಲಾಗಿದೆ ಎಂದು ಹೇಳಿದರು.

8ನೇ ತರಗತಿಯಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳನ್ನು ಕೇಂದ್ರ ಬಿಂದುವಾಗಿಟ್ಟುಕೊಂಡು ವಿದ್ಯಾರ್ಥಿಗಳ ಸಾಮರ್ಥ್ಯ, ಅವರ ಆಕಾಂಕ್ಷೆಯನ್ನು ಮೌಲ್ಯಮಾಪನ ಮಾಡುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರು ಮಾಡಲಾಗುತ್ತದೆ ಎಂದು ಹೇಳಿದರು.

ವಿವೇಕಾನಂದ ಶಿಕ್ಷಣ ಸಂಸ್ಥೆಯ ಧರ್ಮದರ್ಶಿ ಎಂ.ಪ್ರಕಾಶ್, ವಿದ್ಯಾಶ್ರಮ ಲರ್ನಿಂಗ್ ಅಕಾಡೆಮಿಯ ಬಿ. ಎಸ್.ಯೋಗೇಂದ್ರ, ರೋಟರಿ ಶಿಕ್ಷಣ ಸಂಸ್ಥೆಯ ಹನುಮಂತೇಗೌಡ, ಬಿ.ಸಿ.ಪಾರ್ಥಸಾರಥಿ. ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಡಾ.ಮಹೇಂದ್ರಸಿಂಗ್ ಕಾಳಪ್ಪ, ರಮೇಶ್, ಬಸವನಹಳ್ಳಿ ರಾಜು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net