

ಲಕ್ಷೆ್ಮೕಶ್ವರ: ತಾಲೂಕಿನ ಅಡರಕಟ್ಟಿ ಗ್ರಾಮ ಪಂಚಾಯಿತಿಯ ರಾಜೀವ ಗಾಂಧಿ ಸೇವಾ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ನೆರವೇರಿಸಲು ಗ್ರಾಪಂ ಅಧ್ಯಕ್ಷ, ಸದಸ್ಯರು ಮತ್ತು ಗುರು ಹಿರಿಯರು ದ್ಯಾಮವ್ವದೇವಿ ದೇವಸ್ಥಾನದಲ್ಲಿ ಗುರುವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಿದರು.
ಫೆ. 22ರಂದು ಬೆಳಗ್ಗೆ 10.30ಕ್ಕೆ ಅಡರಕಟ್ಟಿ ಗ್ರಾಪಂ ಕಾರ್ಯಾಲಯದಲ್ಲಿ ನಡೆಯುವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ವಹಿಸುವರು. ರಾಜನಹಳ್ಳಿ ವಾಲ್ಮೀಕಿ ಮಹಾಸಂಸ್ಥಾನದ ಜ. ಶ್ರೀ ವಾಲ್ಮೀಕಿ ಜ. ಪ್ರಸನ್ನಾನಂದ ಮಹಾಸ್ವಾಮಿಗಳು ಹಾಗೂ ಆದರಹಳ್ಳಿ ಗವಿಮಠದ ಮಹಾತಪಸ್ವಿ ಡಾ.ಕುಮಾರ ಮಹಾರಾಜರು ನೇತೃತ್ವ ವಹಿಸುವರು. ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಉಪಸಭಾಪತಿ ರುದ್ರಪ್ಪ ಲಮಾಣಿ ಘನ ಉಪಸ್ಥಿತರಿರುವರು. ನೂತನ ಅರಿವು ಕೇಂದ್ರ ಕಟ್ಟಡವನ್ನು ಕಾನೂನು ಸಚಿವ ಡಾ.ಎಚ್.ಕೆ. ಪಾಟೀಲ, ನೂತನ ಗ್ರಾಪಂ ಕಟ್ಟಡವನ್ನು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸುವರು. ಶಾಸಕ ಡಾ.ಚಂದ್ರು ಲಮಾಣಿ ಅಧ್ಯಕ್ಷತೆ ವಹಿಸುವರು. ಅಂಗನವಾಡಿ ಕಟ್ಟಡ, ತ್ಯಾಜ್ಯ ವಿಲೇವಾರಿ ಘಟಕವನ್ನು ಉದ್ಘಾಟಿಸಲಿ ತಿರ್ವನಿಸಲಾಯಿತು.
ಗ್ರಾಪಂ ಅಧ್ಯಕ್ಷೆ ಪ್ರೇಮವ್ವ ಲಮಾಣಿ, ಉಪಾಧ್ಯಕ್ಷೆ ಕಾಶವ್ವ ದೊಡ್ಡಮನಿ, ಸದಸ್ಯರುಗಳಾದ ನಿಂಗಪ್ಪ ಪ್ಯಾಟಿ, ಗಣೇಶ ನಾಯಕ, ಸೋಮಪ್ಪ ಹವಳದ, ಹರೀಶ ಲಮಾಣಿ, ಪವಿತ್ರಾ ಗಡೆಪ್ಪನವರ, ಕಮಲವ್ವ ಲಮಾಣಿ, ಕವಿತಾ ಲಮಾಣಿ, ಲಕ್ಷ್ಮೀ ಕಾರಬಾರಿ, ಸೋಮಕ್ಕ ತಳವಾರ, ಚನ್ನಪ್ಪ ಹಳೆಮನಿ, ಸೋಮಣ್ಣ ಭಂಗಿ, ಕುಮಾರ ಚಕ್ರಸಾಲಿ, ಮಾನಪ್ಪ ಲಮಾಣಿ, ಮಹಾಂತೇಶ ಹವಳದ, ಮುತ್ತುರಾಜ ಗಡೆಪ್ಪನವರ, ಇತರರಿದ್ದರು.