ವಿವಿಧ ಸಂಘಗಳ ಉದ್ಘಾಟನೆ, ಪ್ರತಿಭಾ ಪುರಸ್ಕಾರ

New Project (33)
Published on

ಸುಳ್ಯ: ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ವಿದ್ಯಾರ್ಥಿ ಸಂಘ, ವಿವಿಧ ಸಂಘಗಳ ಹಾಗೂ ಪ್ರತಿಭಾ ಪುರಸ್ಕಾರವನ್ನು ಕುಕ್ಕೆ ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ಉದ್ಘಾಟಿಸಿದರು.

ದ.ಕ. ಗೌಡ ವಿದ್ಯಾ ಸಂಘ ಅಧ್ಯಕ್ಷ ಧನಂಜಯ ಅಡ್ಪಂಗಾಯ ಅಧ್ಯಕ್ಷತೆ ವಹಿಸಿದ್ದರು. ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ತಾಲೂಕಿನಲ್ಲಿ ಪ್ರಥಮ ಸ್ಥಾನಿಯಾದ ಹರ್ಷಿತಾ ಸೇರಿ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕಿ ಪ್ರಭಾವತಿ ಹಾಗೂ ಉಪನ್ಯಾಸಕ ದಾಮೋದರ ಎನ್. ಪ್ರತಿಜ್ಞಾವಿಧಿ ಬೋಧಿಸಿದರು. ದ.ಕ ಗೌಡ ವಿದ್ಯಾ ಸಂಘ ಖಜಾಂಚಿ ಮಾಧವ ಗೌಡ, ನಿರ್ದೇಶಕಿ ಡಾ.ಸಾಯಿಗೀತಾ ಜ್ಞಾನೇಶ್, ಶ್ರೀ ಶಾರದಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ದಯಾಮಣಿ ಕೆ., ಪ್ರೌಢಶಾಲಾ ವಿಭಾಗ ಮುಖ್ಯ ಶಿಕ್ಷಕಿ ಭಾರತಿ ಪಿ., ಶಿಕ್ಷಕಿ ಗಾಯತ್ರಿ, ಉಪನ್ಯಾಸಕ ಪ್ರಸನ್ನ ಎನ್.ಎಚ್. ಮೊದಲಾದವರಿದ್ದರು. ಪ್ರಾಂಶುಪಾಲ ದಯಾಮಣಿ ಕೆ. ಸ್ವಾಗತಿಸಿದರು. ವಿದ್ಯಾರ್ಥಿಗಳಾದ ತನುಜ್ಞ ಸಿ.ಕೆ., ಕೆ.ಆಯಿಷಾತ್ ಅಜ್ಮೀನ ನಿರೂಪಿಸಿದರು. ಮುಖ್ಯ ಶಿಕ್ಷಕಿ ಭಾರತಿ ಪಿ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net