

ವಿಜಯವಾಣಿ ಸುದ್ದಿಜಾಲ ಉಡುಪಿ
ಯಕ್ಷಗಾನವೆಂದರೆ ಕೇವಲ ಕಲೆಯಲ್ಲ, ಅದೊಂದು ವಿಸ್ಮಯದ ಜಗತ್ತು. ಅಲ್ಲಿ ಎಲ್ಲವೂ ಇದೆ. ಗಾಯನ, ನೃತ್ಯ, ಕಥನ, ಜೀವನ ಎಲ್ಲವೂ ಒಳಗೊಂಡ ವಿಶಿಷ್ಟ ಮಾಧ್ಮಮವದು. ಯಕ್ಷಗಾನವೇ ಉಸಿರಾಗಿರುವ ಕರಾವಳಿಯ ನೆಲದ ಸಂಸತಿಯಲ್ಲಿ ಹುಟ್ಟಿ ಬೆಳೆದಿದ್ದೇನೆ ಎಂದು ಹೇಳಿಕೊಳ್ಳಲು ನನಗೆ ತುಂಬ ಅಭಿಮಾನವೆನಿಸುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ. ಧರಣೀದೇವಿ ಮಾಲಗತ್ತಿ ಹೇಳಿದರು.
ಭಾಗವತ ವಿಶ್ವಾಸ್ ಕರ್ಬೆಟ್ಟು ಬಸವಣ್ಣ ಮತ್ತು ಅಕ್ಕಮಹಾದೇವಿಯ ವಚನಗಳನ್ನು ಯಕ್ಷಗಾನ ಶೈಲಿಗೆ ಸಂಯೋಜಿಸಿ ಪ್ರಸ್ತುತಪಡಿಸಿದರು. ಮದ್ಲೆಗಾರ ಸ್ಕಂದ ಕೊನ್ನಾರ್ ಮತ್ತು ಪಿಟೀಲು ವಿದ್ವಾನ್ ಪ್ರಣಿತ್ ಬಳ್ಳಕ್ಕರಾಯ ಹಿಮ್ಮೇಳದಲ್ಲಿ ಸಹಕರಿಸಿದರು.
ಥಿಯೇಟರ್ ಯಕ್ಷ ಸಂಸ್ಥೆಯ ಸಂಚಾಲಕ ಸುನೀಲ್ ಪಲ್ಲಮಜಲು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಯೋಜಕ, ಹಿರಿಯ ವೇಷಧಾರಿ ಶಶಿಕಿರಣ್ ಕಾವು ಅತಿಥಿಗಳನ್ನು ಗೌರವಿಸಿದರು. ನಾಗೇಶ್ ಬೈಲೂರು ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಪೃಥ್ವೀರಾಜ ಕವತ್ತಾರು ನಿರ್ದೇಶನದಲ್ಲಿ ಉಡುಪಿಯ ಥಿಯೇಟರ್ ಯಕ್ಷ ತಂಡದವರಿಂದ ಶ್ರೀ ಮನೋಹರ ಸ್ವಾಮಿ ಪರಾಕು ಯಕ್ಷಗಾನ ಪ್ರದರ್ಶನಗೊಂಡಿತು.
ಯಕ್ಷಗಾನ ಎಲ್ಲವನ್ನೂ ಎಲ್ಲರನ್ನೂ ತನ್ನೊಳಗೆ ಸೇರಿಸಿಕೊಳ್ಳುತ್ತ ಸಮಾಜಮುಖಿ ಕಲೆಯಾಗಿ ಬೆಳೆದುಬಂದಿದೆ. ಯಕ್ಷಗಾನವನ್ನು ಜನರ ಕಲೆಯಾಗಿ ಉಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ. | ಡಾ. ಧರಣೀದೇವಿ ಮಾಲಗತ್ತಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ