

ವಿಜಯವಾಣಿ ಸುದ್ದಿಜಾಲ ಉಡುಪಿ
ತುಳುನಾಡಿನ ಪ್ರಾಚೀನ ಕ್ರೀಡಾ ಸಿರಿಯನ್ನು ಯುವ ಸಮುದಾಯಕ್ಕೆ ತಿಳಿಯಪಡಿಸಲು ಆಧುನಿಕ ಕ್ರೀಡೆಯಲ್ಲಿ ಕೇವಲ ರಂಜನೆ ಸಿಗುತ್ತದೆ. ಆದರೆ, ನಮ್ಮ ಜಾನಪದ ಕ್ರೀಡೆಯಲ್ಲಿ ಸಹಜತೆ ಇದೆ. ವಿಶೇಷ ಸೊಗಡಿದ್ದು, ಜ್ಞಾನವೂ ವೃದ್ಧಿಯಾಗುತ್ತದೆ. ತುಳುನಾಡಿನ ಕ್ರೀಡೆಗಳು ಪರಿಸರಕ್ಕೆ ಹತ್ತಿರವಾದ ಹಾಗೂ ಪೂರಕವಾದ ಜಾನಪದ ಕ್ರೀಡೆಗಳಾಗಿವೆ. ಇವುಗಳ ರಕ್ಷಣೆ ಅತ್ಯಗತ್ಯ ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೋಶಾಧಿಕಾರಿ ಚೈತನ್ಯ ಎಂ.ಜಿ., ಪದಾಧಿಕಾರಿ ಡಾ. ವಿ.ಕೆ. ಯಾದವ್, ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷ ಲಕ್ಷ್ಮೀಕಾಂತ ಬೆಸ್ಕೂರು, ಕೋಶಾಧಿಕಾರಿ ದಿವಾಕರ ಶೆಟ್ಟಿ, ಕ್ರೀಡಾಕೂಟದ ಸಂಚಾಲಕ ರತ್ನಾಕರ ಇಂದ್ರಾಳಿ, ತಾರಾ ಸತೀಶ, ವಿದ್ಯಾ, ದಿನೇಶ ಶೆಟ್ಟಿಗಾರ ಇತರರು ಉಪಸ್ಥಿತರಿದ್ದರು. ಭಾರತ ಮೇಳದ ಸಂಚಾಲಕ ಕೆ.ವಿ. ರಮಣ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.