ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷಣ ಅಡಿಗಲ್ಲು: ಅರುಣ್ ಕೋಟ್ಯಾನ್ ಹೇಳಿಕೆ

New Project (1)
Published on

ಬೆಳ್ತಂಗಡಿ: ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷಣವೇ ಅಡಿಗಲ್ಲು. ವಿದ್ಯಾರ್ಥಿಗಳು ಅವಕಾಶ ಸದ್ಬಳಕೆ ಮಾಡಿಕೊಂಡು ಪ್ರತಿಭೆ ಬೆಳಗಿಸಬೇಕು. ತುಳುನಾಡು ಅನೇಕ ವಿಶೇಷತೆಗಳ ಸಮೃದ್ಧ ಪರಂಪರೆಯ ಭೂಮಿ. ತುಳುವರಾದವರು ಎಲ್ಲೇ ಹೋದರೂ ತುಳು ಆಚಾರ, ವಿಚಾರ, ಸಂಸ್ಕೃತಿ, ಸಂಪ್ರದಾಯ ಎಂದಿಗೂ ಮರೆಯಬಾರದು ಎಂದು ಅನುಗ್ರಹ ಪಪೂ ಕಾಲೇಜು ಉಪನ್ಯಾಸಕ ಅರುಣ್ ಕೋಟ್ಯಾನ್ ಹೇಳಿದರು.

ಬೆಳ್ತಂಗಡಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ ‘ತುಳುವ ಐಸಿರ-2025’ ತುಳು ಸಂಘ ಉದ್ಘಾಟಿಸಿ ಮಾತನಾಡಿದರು.

ಮೊಸರನ್ನು ಕಡೆದು ಬೆಣ್ಣೆ ತೆಗೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಶ್ರೀ ಗುರುದೇವ ಪಪೂ ಕಾಲೇಜು ಪ್ರಾಂಶುಪಾಲ ಸುಕೇಶ್ ಕುಮಾರ್ ಕೆ.ಅಧ್ಯಕ್ಷತೆ ವಹಿಸಿದ್ದರು. ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಡಾ.ಸವಿತಾ, ಶ್ರೀ ಗುರುದೇವ ಪಪೂ ಕಾಲೇಜು ಉಪ ಪ್ರಾಂಶುಪಾಲ ಬಿ.ಎ.ಶಮೀವುಲ್ಲಾ ಮಾತನಾಡಿದರು. ವಿದ್ಯಾರ್ಥಿಗಳಾದ ದ್ವಿತೀಯ ವಿಜ್ಞಾನ ವಿಭಾಗದ ದೀಪಕ್, ದ್ವಿತೀಯ ವಾಣಿಜ್ಯ ವಿಭಾಗದ ಖುಷಿ ಅಭಿಪ್ರಾಯ ಹಂಚಿಕೊಂಡರು. ತುಳು ಒಗಟು, ತುಳು ಪರಿಕರಗಳ ಸ್ಪರ್ಧೆ ಬಹುಮಾನ ವಿತರಣೆ ನಡೆಯಿತು.

ತುಳು ಸಂಘದ ವಿದ್ಯಾರ್ಥಿ ಪ್ರತಿನಿಧಿಗಳಾದ ಶ್ರುತಾ, ಅಂಕಿತ್ ಉಪಸ್ಥಿತರಿದ್ದರು. ತುಳು ಸಂಘದ ಸಂಯೋಜಕರಾದ ರಾಕೇಶ್ ಕುಮಾರ್ ಸ್ವಾಗತಿಸಿದರು. ಸೌಜನ್ಯಾ ನಿರೂಪಿಸಿದರು. ಉಪನ್ಯಾಸಕರಾದ ಗಣೇಶ್ ಬಿ.ಶಿರ್ಲಾಲು ಪರಿಚಯಿಸಿದರು. ಸುಷ್ಮಾ ವಂದಿಸಿದರು. ಉಪನ್ಯಾಸಕ ಹರೀಶ್ ಪೂಜಾರಿ ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net