ಎರಡು ದಿನಗಳ ಚಿಂತನ ಮಂಥನ ಕಾರ್ಯಕ್ರಮ ಉದ್ಘಾಟನೆ *ಪ್ರಜಾತಂತ್ರ ನಾಶ ಮಾಡಲು ಯಾರಿಂದ ಸಾಧ್ಯವಿಲ್ಲ-ಶಿವಸುಂದರ್

raichur
raichur
Published on

ರಾಯಚೂರು ಸಾಮಾಜಿಕ ಹಾಗೂ ಆರ್ಥಿಕ ಪ್ರಜಾತಂತ್ರವನ್ನು ರಾಜಕೀಯ ಪ್ರಜಾತಂತ್ರ ನಾಶ ಮಾಡಲು ಸಾಧ್ಯವಿಲ್ಲ ಎಂದು ಸಾಹಿತಿ ಹಾಗೂ ಚಿಂತಕ ಶಿವಸುಂದರ್ ಹೇಳಿದರು.

ನಗರದ ಕೃಷಿ ವಿವಿಯ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಶನಿವಾರ ಹೈದ್ರಾಬಾದ್ ಕರ್ನಾಟಕ ಜನಾಂದೋಲನ ಕೇಂದ್ರ ಹಾಗೂ ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ವರ್ತಮಾನ ಸಂದರ್ಭದ ರಾಜಕಾರಣ ತತ್ವ ಸಿದ್ಧಾಂತಗಳ ಮನನ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನ ಮತ್ತು ಬಯಸಿದ್ದ ಸಂವಿಧಾನ ವಿಷಯದ ಕುರಿತು ವಿಷಯ ಮಂಡಿಸಿದರು. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಹಾಗೂ ಪತ್ರಿಕಾ ರಂಗ ಈ ನಾಲು ಅಂಗಗಳಿಂದ ಸಂವಿಧಾನದ ಕುರಿತು ವಿಪರತೆ ಮೂಡುತ್ತದೆ. ಈ ನಾಲ್ಕು ಅಂಗ ಸಂಸ್ಥೆಗಳನ್ನು ನಮ್ಮನ್ನು ಸಂಪೂರ್ಣವಾಗಿ ಸೋಲಿಸುತ್ತಿವೆ. ಮೂರು ಸಾವಿರ ವರ್ಷದ ನಾಗರೀಕತೆಯಿಂದಲೂ ಇರುವ ಸಮಾನತೆಯೂ ಪ್ರಸ್ತುತ ಮಾಯವಾಗುತ್ತಿವೆ ಎಂದರು.

ಪಕ್ಷಗಳು ತೀವ್ರ ರೀತಿಯಲ್ಲಿ ಕುಲಗೆಟ್ಟು ಹೋಗಿದ್ದು, ಸಂವಿಧಾನಕ್ಕೂ ಒಂದು ಏಜೆನ್ಸಿಯ ಅಗತ್ಯತೆಯಿದೆ. ಹಿಂದೂ ಮುಸ್ಲಿಂ, ಕ್ರೈಸ್ತ, ಪಾರ್ಸಿ, ಸಿಖ್‌ಗಳಂತೆ ದಲಿತರಿಗೂ ಚುನಾವಣೆಯಲ್ಲಿ ಕನಿಷ್ಟ ಪ್ರಾತಿನಿಧ್ಯ ಸಿಗಬೇಕಿದೆ. ಸಂವಿಧಾನದಲ್ಲಿ 141 ಬಾರಿ ವಿ ದ ಪೀಪಲ್ ಎಂದು ಬಳಸಲಾಗಿದೆ. ಇದೊಂದು ಅತ್ಯುತ್ತಮವಾದ ಅಂಶವಾಗಿದ್ದು, ಒಂದು ದೇಶದಲ್ಲಿ ಎರಡು ವಿಧದಲ್ಲಿ ರಾಜಕಾರಣ ನಡೆಯುತ್ತದೆ. ಒಂದು ಕೇಂದ್ರ ಸರ್ಕಾರದ ರಾಜಕಾರಣ, ಇನ್ನೊಂದು ರಾಜ್ಯ ರಾಜಕಾರಣ ಆದರೆ ಭಾರತದಲ್ಲಿ ಕೆಟ್ಟದೊಂದು ರಾಜಕಾರಣವಿದ್ದು, ಕೇಂದ್ರ ಸರ್ಕಾರ ಬಲಿಷ್ಠವಾದಾಗ ತಮ್ಮ ವಿರೋಧ ಪಕ್ಷಗಳು ಆಡಳಿತದಲ್ಲಿ ಇರುವ ರಾಜ್ಯಗಳ ಮೇಲೆ ತಮ್ಮ ಶಕ್ತಿ ಪ್ರದರ್ಶನ ತೋರಿಸುವುದು ಇದೊಂದು ಕೆಟ್ಟ ಹಾಗೂ ಕಾಳಸಂತೆಯ ವ್ಯಾಪಾರದಂತಿದೆ ಎಂದು ತಿಳಿಸಿದರು.

ಹೈದ್ರಾಬಾದ್ ಕರ್ನಾಟಕ ಜನಾಂದೋಲನ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಬದುಕನ್ನು ಬಿಟ್ಟು ಭಾವನಾತ್ಮಕ ವಿಷಯಗಳ ಕುರಿತು ಚರ್ಚೆಗಳಾಗುತ್ತಿವೆ. ಜನವಿರೋಧಿ, ಜಾತಿವಾದ ಮಾತುಗಳು ಬಿಟ್ಟು ಬದುಕಿಗೆ ಪೂರಕವಾದ ತತ್ವ ಚಿಂತನೆಗಳು ಬೆಳೆಯಬೇಕಿದೆ ಎಂದರು. ಪ್ರಸ್ತುತ ಸಂವಿಧಾನವನ್ನು ಕಡೆಗಣಿಸುವ ಪ್ರಕ್ರಿಯೆ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿದ್ದು, ಸಂವಿಧಾನದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ. ಸಂವಿಧಾನವೇ ನಮ್ಮ ಜೀವನದ ಆದರ್ಶ, ತತ್ವಸಿದ್ಧಾಂತವಾಗಬೇಕಿದೆ. ಆದರೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕ್ರಿಮಿನಲ್ ಹಿನ್ನೆಲೆಯಿರುವ ವ್ಯಕ್ತಿಗಳು ದೇಶದ ಗೃಹ ಸಚಿವರು, ಪ್ರಧಾನಮಂತ್ರಿಗಳು, ರಾಜ್ಯದ ಮುಖ್ಯಮಂತ್ರಿ ಮತ್ತು ಸಚಿವರಾಗಿರುವುದು ದುರಂತವಾಗಿದೆ. ಸಂವಿಧಾನ ಸಶಕ್ತವಾಗಬೇಕಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹೋರಾಟಗಾರ ಚಂದ್ರಶೇಖರ ಬಾಳೆ, ರವಿ ಪಾಟೀಲ್ ಫೌಂಡೇಷನ್ ಅಧ್ಯಕ್ಷ ರವಿಕುಮಾರ ಪಾಟೀಲ್, ಚಂದ್ರಗೀರೀಶ, ಜನಾಂದೋಲನ ಕೇಂದ್ರದ ಗೌರವಾಧ್ಯಕ್ಷೆ ಶಾರದಾ ಹುಲಿನಾಯಕ, ಜಿಲ್ಲಾಧ್ಯಕ್ಷ ಬಿ.ಬಸವರಾಜ, ಪ್ರದೇಶ ಅಧ್ಯಕ್ಷ ಖಾಜಾ ಅಸ್ಲಂ, ಬೂದೆಪ್ಪ ಕರ್ಲಿ, ಶಾಮಲಾ ಪೂಜಾರ, ಸಮ್ಮದ್, ಜಾನ್‌ವೆಸ್ಲಿ, ಚನ್ನಬಸವ ಜಾನೇಕಲ್ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net