

ನರಸಾಪುರ: ಸಹಕಾರ ಸಂಘ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, 10 ವರ್ಷಗಳ ಕನಸು ನನಸಾಗಲಿದೆ ಎಂದು ನರಸಾಪುರ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ಖಾಜಿ ಕಲ್ಲಹಳ್ಳಿ ಕೆ.ಎಂ.ಮುನಿರಾಜು ತಿಳಿಸಿದರು.
ಕೋಲಾರ ತಾಲೂಕು ನರಸಾಪುರದ ಸಹಕಾರ ಸಂಘದ ಆವರಣದಲ್ಲಿ ಏರ್ಪಡಿಸಿದ್ದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿ, 2016ರಲ್ಲಿ ಅಧ್ಯಕ್ಷನಾದ ವೇಳೆ ಕಟ್ಟಡ ನಿಮಾರ್ಣ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಲೋನ್ಗಳು ಕಡಿಮೆ ಇದ್ದು, ಸುಮಾರು 25 ಲಕ್ಷ ರೂ. ಇತ್ತು. ನಂತರದ ಅವಧಿಯಲ್ಲಿ ಸುಮಾರು 700 ರಿಂದ 800 ರೈತರಿಗೆ 10 ಕೋಟಿ ರೂ. ಕೆಸಿಸಿ ಸಾಲ ಕೊಡಿಸಿದ್ದು, ಅದರಲ್ಲಿ ಸುಮಾರು 6.50 ಕೋಟಿ ರೂ.ಸಾಲ ಮನ್ನಾ ಆಯಿತು, ಮಹಿಳೆಯರಿಗೆ ಸುಮಾರು 40 ಕೋಟಿ ರೂ. ಬಡ್ಡಿ ರಹಿತ ಸಾಲ ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಡಿಸಿಸಿ ಬ್ಯಾಂಕ್ ಹಲವಾರು ಕಾರಣಗಳಿಂದ ಸಾಲ ನೀಡುವುದನ್ನು ನಿಲ್ಲಿಸಿದ ಹಿನ್ನೆಲೆಯಲ್ಲಿ ನಾವು ಸಾಲ ನೀಡುವುದು ವಿಳಂಬವಾಗುತ್ತಿದೆ. ಮುಂದಿನ ದಿನಗಳಲ್ಲಿ ಡಿಸಿಸಿ ಬ್ಯಾಂಕ್ ಸಾಲ ನೀಡಲು ಅನುಕೂಲ ಮಾಡುತ್ತದೆ ಎಂಬ ಆಶಾಭಾವವಿದೆ ಎಂದರು.
ಇನ್ನೆರಡು ತಿಂಗಳಲ್ಲಿ ಈ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟಿಸಲಿದ್ದು, ತಿಂಗಳಿಗೆ ಸುಮಾರು 1 ಲಕ್ಷ ರೂ. ಬಾಡಿಗೆ ಬರುವಂತೆ ಕ್ರಮ ಕೈಗೊಳ್ಳಲಾಗುತ್ತದೆ. ಸಹಕಾರ ಸಂಘದ ವ್ಯಾಪ್ತಿಗೆ ಸೇರಿದ ಸುಮಾರು 40 ಹಳ್ಳಿಗಳ ರೈತರನ್ನು ಕರೆಸಿ ಸಹಕಾರ ಹಬ್ಬ ಮಾಡಲಾಗುತ್ತದೆ. ಈ ಭವನಕ್ಕೆ ದಿ.ಸಿ.ಬೈರೇಗೌಡರ ಸಹಕಾರ ಭವನ ಎಂದು ಹೆಸರಿಡಲಾಗುತ್ತದೆ ಎಂದು ತಿಳಿಸಿದರು.
ಕಲ್ವ ಬಿ.ರಾಜಣ್ಣ, ವಿಶ್ವನಾಥಪುರ ಮುನಿಯಪ್ಪ, ಬೆಳ್ಳೂರು ವೆಂಕಟೇಶಪ್ಪ, ನರಸಾಪುರ ಬಿ, ಜಮುನಾ, ನರಸಾಪುರ ಟಿ.ನಾಗರಾಜ್, ಚಲ್ಲಹಳ್ಳಿ ಅಶೋಕ್ ಇದ್ದರು.