

ನುಗ್ಗೇಹಳ್ಳಿ: ರೈತರು ಬೆಳೆದ ಗುಣಮಟ್ಟದ ಕೆಂಪು ರಾಗಿಯನ್ನು ಬೆಂಬಲ ಬೆಲೆ ಯೋಜನೆಯ ರಾಗಿ ಖರೀದಿ ಕೇಂದ್ರಕ್ಕೆ ತರಬೇಕು ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿಗೌಡ ಸೋಮವಾರ ಮನವಿ ಮಾಡಿದರು.
ಹೋಬಳಿಯ ಎಪಿಎಂಸಿ ಆವರಣದಲ್ಲಿ ಆಯೋಜಿಸಿದ್ದ ರಾಗಿ ಬೆಂಬಲ ಬೆಲೆಯ ಖರೀದಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರ ರೈತರು ಬೆಳೆದ ರಾಗಿಗೆ ಬೆಂಬಲ ಬೆಲೆಯಾಗಿ ಹೆಚ್ಚುವರಿ 1 ಸಾವಿರ ಹಣ ನೀಡುತ್ತಿದೆ. ಈ ರಾಗಿಯನ್ನು ಮಾರ್ಕೆಟಿಂಗ್ ಫೆಡರೇಶನ್ ಹಾಗೂ ಆಹಾರ ನಾಗರಿಕ ಸರಬರಾಜು ಇಲಾಖೆಗಳ ಮೂಲಕ ಸಾಗಣೆಯಾಗಿ ಮತ್ತೆ ನಿಮ್ಮ ನ್ಯಾಯಬೆಲೆ ಅಂಗಡಿಗಳಲ್ಲಿ ನಿಮ್ಮ ರಾಗಿಯನ್ನು ಸರ್ಕಾರವೇ ನಿಮಗೆ ಉಚಿತವಾಗಿ ನೀಡುತ್ತದೆ. ಆಹಾರದಲ್ಲಿ ಕಲ ಬೆರಕೆ ಆಗಬಾರದು ಎಂಬ ಕಾರಣಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಹಾಗಾಗಿ ರೈತರು ಕಲ್ಲು ಮಣ್ಣು ರಾಗಿ, ಕಪ್ಪು ರಾಗಿಯನ್ನು ಖರೀದಿ ಕೇಂದ್ರಕ್ಕೆ ತರಬಾರದು ಎಂದು ಸೂಚನೆ ನೀಡಿದರು.
ಕೃಷಿ ಅಧಿಕಾರಿ ಜೀ.ವಿ.ದಿನೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಮಾಜಿ ಉಪಾಧ್ಯಕ್ಷ ಶಿವ ಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕೊಪ್ಪಲು ಮಂಜುನಾಥ ಸ್ವಾಮಿ, ನಟರಾಜ್ ಯಾದವ್, ಖರೀದಿ ಕೇಂದ್ರದ ಅಧಿಕಾರಿಗಳಾದ ಕಾರ್ತಿಕ್ ಭರತ್ ರೈತರು ಇತರರು ಹಾಜರಿದ್ದರು.