

ಬಂಟ್ವಾಳ: ಸಂಘ- ಸಂಸ್ಥೆಗಳನ್ನು ಕಟ್ಟುವುದು ಸುಲಭ. ಆದರೆ ಸಂಘ- ಸಂಸ್ಥೆ, ಸಂಘಟನೆ ದೀರ್ಘವಾಗಿ ಜೀವಂತಿಕೆಯಿಂದ ಕೂಡಿ ಕಾರ್ಯರೂಪಗೊಳ್ಳಬೇಕಾದರೆ ಅವರೊಳಗಿನ ಮನಸ್ಥಿತಿ ಏಕರೂಪವಾಗಿರಬೇಕು. ಸಮಾಜಕ್ಕೆ ಸಹಾಯ ಮಾಡುವ ಮನೋಭಾವ ಎಲ್ಲರಲ್ಲೂ ಮೂಡಿ ಬರಬೇಕು ಎಂದು ಬಂಟ್ವಾಳ ಕ್ಷೇತ್ರ ಶಾಸಕ ರಾಜೇಶ್ ನಾೈಕ್ ಹೇಳಿದರು.
ವೀರಕಂಭ ಮಾತೃಶ್ರೀ ಗೆಳೆಯರ ಬಳಗ 25 ವರ್ಷ ಪೂರೈಸಿದ ಸವಿನೆನಪಿಗಾಗಿ ವೀರಕಂಭ ಗ್ರಾಮದ ಅನಂತಾಡಿ ಕ್ರಾಸ್ ರಸ್ತೆಯ ಬಳಿ ನಿರ್ಮಾಣಗೊಂಡ ಮಾತೃಶ್ರೀ ಆಶ್ರಯ ಪ್ರಯಾಣಿಕರ ತಂಗುದಾಣವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಮಾತೃಶ್ರೀ ಗೆಳೆಯರ ಬಳಗದ ಅಧ್ಯಕ್ಷ ರಮೇಶ್ ಗೌಡ ಮೈರಾ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಗಿಲ್ಕಿಂಜತಾಯಿ ಉತ್ಸವ ಸಮಿತಿ ಅಧ್ಯಕ್ಷ ಜಯಪ್ರಕಾಶ್ ತೆಕ್ಕಿಪಾಪು, ವೀರಕಂಭ ಗ್ರಾಪಂ ಉಪಾಧ್ಯಕ್ಷ ಜನಾರ್ದನ ಪೂಜಾರಿ, ಪಂಚಾಯಿತಿ ಸದಸ್ಯರಾದ ದಿನೇಶ್ ಪೂಜಾರಿ, ಸಂದೀಪ್ ಕೆಲಿಂಜ, ಜಯಂತಿ ಜನಾರ್ದನ್, ಮೀನಾಕ್ಷಿ ಸುನೀಲ್, ಪಿಡಬ್ಲುೃ ಕಂಟ್ರಾಕ್ಟರ್ ಪದ್ಮನಾಭ ಗೌಡ ಮೈರ, ವೀರಕಂಭ ಹಾಲು ಉತ್ಪಾದಕರ ಸಹಕಾರಿ ಸಂಘ ಅಧ್ಯಕ್ಷ ವೀರಪ್ಪ ಮೂಲ್ಯ ಬೆತ್ತಸರವು, ಸದಸ್ಯರಾದ ನಾರಾಯಣ ಮೂಲ್ಯ, ಕೇಶವ ನಾಯ್ಕ ಕೆಮ್ಮಟೆ, ಆನಂದ ಮೂಲ್ಯ ಮೈರಾ, ಶ್ರೀ ಶಾರದಾ ಭಜನಾ ಮಂದಿರ ಸಂಚಾಲಕ ನಾರಾಯಣ ಭಟ್, ರುಕ್ಮಯ ಮೂಲ್ಯ ಮೈರಾ, ಮಂಜಪ್ಪ ಮೂಲ್ಯ ಮೈರಾ, ಇಂಜಿನಿಯರ್ ರಾಮಣ್ಣ ಮೂಲ್ಯ ಮಜಿ, ಸಂಜೀವ ಮೂಲ್ಯ ಮಜಿ, ಚಂದ್ರಶೇಖರ್ ಶೆಟ್ಟಿ, ಕೇಶವ ಮೂಲ್ಯ ಮಜಿ, ಕರುಣಾಕರ ಆಳ್ವ ಮೈರಾ ಮೊದಲಾದವರು ಉಪಸ್ಥಿತರಿದ್ದರು.
ಮಾತೃಶ್ರೀ ಗೆಳೆಯರ ಬಳಗದ ಸುಧಾಕರ ಮೈರಾ ಸ್ವಾಗತಿಸಿದರು. ಕಾರ್ಯದರ್ಶಿ ಕಿಶೋರ್ ಮೈರಾ ವಂದಿಸಿದರು. ಕೆಎಂಎ್ ವಿಸ್ತರಣಾಧಿಕಾರಿ ಜಗದೀಶ್ ಕಾರ್ಯಕ್ರಮ ನಿರೂಪಿಸಿದರು.