

ಬಾಳೆಹೊನ್ನೂರು: ಖಾಂಡ್ಯ ಹೋಬಳಿಯ ಹುಯಿಗೆರೆಯ ಶಂಕರ ಭಾರತಿ ಗೋಶಾಲೆಯಲ್ಲಿ ಗೋವುಗಳಿಗಾಗಿ ನೂತನವಾಗಿ ನಿರ್ಮಿಸಿರುವ ಎರಡು ಸೂರುಗಳನ್ನು ಉದ್ಘಾಟಿಸಿ ಗೋವುಗಳನ್ನು ಕಟ್ಟಲಾಯಿತು.
ಗೋಶಾಲೆ ಮುಖ್ಯಸ್ಥ ಪ್ರವೀಣ್ ಖಾಂಡ್ಯ ಮಾತನಾಡಿ, ಶೃಂಗೇರಿಯ ಶಾರದಾ ಪೀಠದ ಸಹಕಾರದಿಂದ ಶಂಕರ ಭಾರತಿ ಗೋ ಶಾಲೆಯಲ್ಲಿ ಎರಡು ನೂತನ ಗೋವುಗಳನ್ನು ಕಟ್ಟುವ ಕಟ್ಟಡವನ್ನು ಸುಸಜ್ಜಿತವಾಗಿ ನಿರ್ಮಿಸಿದ್ದು, ಜಗದ್ಗುರುಗಳ ಆಶೀರ್ವಾದದಿಂದ ಲೋಕಾರ್ಪಣೆಗೊಳಿಸಲಾಗಿದೆ. ಸುಮಾರು 60 ಗೋವುಗಳನ್ನು ಈ ಸೂರಿನಲ್ಲಿ ಕಟ್ಟಬಹುದಾಗಿದ್ದು, ಗೋವುಗಳಿಗೆ ಉತ್ತಮ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂದರು.
ಉದ್ಯಮಿ ಗದ್ದೆಮನೆ ವಿಶ್ವನಾಥ್ ಅವರು ಗೋ ಶಾಲೆಗೆ 50 ಸಾವಿರ ರೂ. ಧನ ಸಹಾಯ ನೀಡಿದ್ದು, ಅದನ್ನು ಸಹ ಸ್ವೀಕರಿಸಿ ಗೋವುಗಳ ಸೇವೆಗೆ ಬಳಸಿಕೊಳ್ಳಲಾಗುವುದು. ಲ್ೈಲೈನ್ ಫೀಡ್ಸ್ ಮಾಲೀಕ ಕಿಶೋರ್ ಕುಮಾರ್ ಹೆಗ್ಡೆ ಅವರು ಗೋವುಗಳ ಚಿಕಿತ್ಸಾ ಘಟಕ ನಿರ್ಮಾಣಕ್ಕೆ ಸಹಕಾರ ನೀಡಿದ್ದು, ಅದರ ಕಾರ್ಯಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿದೆ. ಚಿಕಿತ್ಸಾ ಘಟಕ ಶೀಘ್ರದಲ್ಲಿ ಸೇವೆಗೆ ಒದಗಿದಲಾಗುವುದು ಎಂದು ತಿಳಿಸಿದರು. ದೇವದಾನ ಗ್ರಾಪಂ ಅಧ್ಯಕ್ಷ ಸಂಪತ್ ಮಾಗಲು, ಪ್ರಮುಖರಾದ ಮತ್ವಾನೆ ಈಶ್ವರ್, ಅಂಡವಾನೆ ಗಿರೀಶ್, ಮಾಗಲು ಪ್ರವೀಣ್, ಗುಡ್ಡೇಕೊಪ್ಪ ರಜಿತ್, ರಂಜಿತ್ ಮತ್ತಿತರರು ಹಾಜರಿದ್ದರು.