ಚಾಮುಂಡೇಶ್ವರಿ ಕ್ಷೇತ್ರದ ನೂತನ ಅಧ್ಯಕ್ಷರ ಪದಗ್ರಹಣ

37
Published on

ಮೈಸೂರು: ಮೈಸೂರು ನಗರ ಬಿಜೆಪಿ ಕಾರ್ಯಾಲಯದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಅವರ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳಿಗೆ ಮಾರ್ಗದರ್ಶನ ನೀಡಲಾಯಿತು. ಚಾಮುಂಡೇಶ್ವರಿ ಗ್ರಾಮಾಂತರ ಮಂಡಲದ ನೂತನ ಅಧ್ಯಕ್ಷ ಟಿ.ರವಿ ಅವರಿಗೆ ನಿಕಟ ಪೂರ್ವ ಅಧ್ಯಕ್ಷ ಜಿ.ಎಂ.ಮಹೇಶ್ ಅವರು ಪಕ್ಷದ ಬಾವುಟ ನೀಡಿ ಜವಾಬ್ದಾರಿ ಹಸ್ತಾಂತರಿಸಿದರು. ಅಲ್ಲದೆ ಚಾಮುಂಡೇಶ್ವರಿ ನಗರ ಮಂಡಲದ ನೂತನ ಅಧ್ಯಕ್ಷ ರಾಕೇಶ್ ಭಟ್ ಅವರಿಗೆ ನಿಕಟ ಪೂರ್ವ ಅಧ್ಯಕ್ಷ ಬಿ.ಎಂ.ರಘು ಅವರು ಜವಾಬ್ದಾರಿ ವಹಿಸಿಕೊಟ್ಟರು.
ಚಾಮುಂಡೇಶ್ವರಿ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿಗಳಾಗಿ ಹೇಮಂತ್, ಶಿವು ಚಿಕ್ಕಕಾನ್ಯ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾಗಿ ಈರೇಗೌಡ, ಸೋಮಶೇಖರ್ ಅಧಿಕಾರ ಸ್ವೀಕರಿಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ರವಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ಜನರು ಸ್ವಯಂ ಪ್ರೇರಿತರಾಗಿ ಬಿಜೆಪಿ ಸೇರ್ಪಡೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಇದು ಮುಂದಿನ ದಿನಗಳಲ್ಲಿ ವರದಾನವಾಗಲಿದ ಎಂದರು.
ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ಪಕ್ಷದ ಬಲ ಹೆಚ್ಚಿದೆ. ಜಿಲ್ಲೆಯಲ್ಲಿ ಎಲ್ಲ ಘಟಕಗಳಿಗೂ ಹೊಸಬರನ್ನು ನೇಮಕ ಮಾಡಿರುವುದು ಪಕ್ಷ ಸಂಘಟನೆಗೆ ಸಹಕಾರಿಯಾಗಲಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರು ಬಿಜೆಪಿ ಕೈಹಿಡಿಯಲಿದ್ದು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಜಯಗಳಿಸಲಿದ್ದಾರೆ. ಅಲ್ಲದೆ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದರು.
ಬಿಜೆಪಿ ಹಿರಿಯ ಮುಖಂಡರಾದ ಗೋಪಾಲ್ರಾವ್, ಶ್ರೀನಿವಾಸ್, ನಗರ ಪ್ರಧಾನ ಕಾರ್ಯದರ್ಶಿಎಚ್.ಜಿ.ಗಿರಿಧರ್, ನಗರ ಪಾಲಿಕೆ ಮಾಜಿ ಸದಸ್ಯೆ ಲಕ್ಷ್ಮೀ ಕಿರಣ್, ನಗರ ಉಪಾಧ್ಯಕ್ಷ ವೇದರಾಜ್, ಮುಖಂಡರಾದ ಎನ್.ಅರುಣ್ ಕುಮಾರ್‌ಗೌಡ. ಮೋನಿಕಾ, ಈರಪ್ಪ, ನಾರಾಯಣ್ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕಾ ರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net