

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಕೇರಳದ ಉನ್ನತ ಶಿಕ್ಷಣ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಕ್ರಾಂತಿಕಾರಿ ಬದಲಾವಣೆ ಕಂಡುಕೊಳ್ಳಲು ಸರ್ಕಾರಕ್ಕೆ ಸಾಧ್ಯವಾಗಿದೆ ಎಂದು ರಾಜ್ಯ ಉನ್ನತ ಶಿಕ್ಷಣ, ಸಾಮಾಜಿಕ ನ್ಯಾಯ ಖಾತೆ ಸಚಿವೆ ಡಾ.ಆರ್.ಬಿಂದು ಹೇಳಿದರು.
ಕೇರಳ ಸರ್ಕಾರದ ಯೋಜನಾ ನಿಧಿಯ ಆರ್ಥಿಕ ನೆರವಿನೊಂದಿಗೆ ಎಳೇರಿತಟ್ಟು ಇ.ಕೆ.ನಾಯನಾರ್ ಸ್ಮಾರಕ ಸರ್ಕಾರಿ ಕಾಲೇಜಿನ ಕ್ಯಾಂಪಸ್ನಲ್ಲಿ ನಿರ್ಮಿಸಲಾದ ಅರ್ಥಶಾಸ್ತ್ರ ಶೈಕ್ಷಣಿಕ ಬ್ಲಾಕ್, ಕ್ಯಾಂಪಸ್ ರಸ್ತೆ, ನೀರಿನ ಟ್ಯಾಂಕ್, ಎನ್ಎಸ್ಎಸ್ ಕೊಠಡಿ, ಐಕ್ಯೂಎಸಿ ಕೊಠಡಿ, ವೈದ್ಯಕೀಯ ಕೊಠಡಿ ಉದ್ಘಾಟಿಸಿ ಮಾತನಾಡಿದರು.
ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಲೋಕೋಪಯೋಗಿ ಕಟ್ಟಡ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುನೀಲ್ ಕುಮಾರ್ ಎ. ವರದಿ ಮಂಡಿಸಿದರು. ವೆಸ್ಟ್ ಎಳೇರಿ ಗ್ರಾಪಂ ಅಧ್ಯಕ್ಷೆ ಗಿರಿಜಾ ಮೋಹನನ್, ಉಪಾಧ್ಯಕ್ಷ ಪಿ.ಸಿ.ಇಸ್ಮಾಯಿಲ್, ಪರಪ್ಪ ಬ್ಲಾಕ್ ಪಂಚಾಯಿತಿ ಸದಸ್ಯ ಎ.ವಿ.ರಾಜೇಶ್, ಗ್ರಾಪಂ ಸದಸ್ಯ ಬಿಂದು ಮುರಳೀಧರನ್, ಶಾಂತಿಕೃಪಾ, ಕಾಲೇಜು ಹಳೇ ವಿದ್ಯಾರ್ಥಿ ಸಂಘದ ಪ್ರತಿನಿಧಿ ಸ್ಕರಿಯಾ ಅಬ್ರಹಾಂ, ಪಿಟಿಎ ಉಪಾಧ್ಯಕ್ಷ ಟಿ.ಜಿ.ಶಶೀಂದ್ರನ್, ಉಪ ಪ್ರಾಂಶುಪಾಲ ಡಾ.ಟೋಬಿ ಜೋಸ್ೆ ಮ್ಯಾಥ್ಯೂ ಕೆ.ಕೆ., ಐಕ್ಯೂಎಸಿ ಸಂಯೋಜಕ ಪಿ.ಜೆ.ಪ್ರಸಾದ್, ಕಾಲೇಜು ಯೂನಿಯನ್ ಅಧ್ಯಕ್ಷೆ ಅಂಜನಾ ಪದ್ಮನ್ ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲ ಮ್ಯಾಥ್ಯೂಸ್ ಪ್ಲಾಮುಟ್ಟಿಲ್ ಸ್ವಾಗತಿಸಿದರು. ಎ್.ವೈ.ಯು.ಜ.ಪಿ. ಸಂಯೋಜಕ ಡಾ.ಪಿ.ಸಿ.ಅಶ್ರ್ ವಂದಿಸಿದರು.
ಕೇರಳ ದಕ್ಷಿಣ ಭಾರತದಲ್ಲೇ ಅತ್ಯುತ್ತಮ ಪ್ರಯೋಗಾಲಯ ಸಂಕೀರ್ಣ ಹೊಂದಿದ್ದು, ಕೌಶಲ ಅಭಿವೃದ್ಧಿ, ವೃತ್ತಿಪರ ಯೋಜನಾ ಕೋಶ ಪ್ರಾರಂಭಿಸಲಾಗುವುದು. ನಾಲ್ಕು ವರ್ಷಗಳಲ್ಲಿ ಕೇರಳದ ಕಾಲೇಜುಗಳಲ್ಲಿ 6,000 ಕೋಟಿ ರೂ.ಗಳ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳಲಾಗಿದೆ. ಸ್ಮಾರ್ಟ್ ತರಗತಿ ಕೊಠಡಿ ಸ್ಥಾಪಿಸಲಾಗಿದೆ. ಜತೆಗೆ ಶೈಕ್ಷಣಿಕ ಬ್ಲಾಕ್, ಆಧುನಿಕ ಗ್ರಂಥಾಲಯ, ಸಭಾಂಗಣ, ಕ್ಯಾಂಪಸ್ ರಸ್ತೆ ಸ್ಥಾಪಿಸಲು ಸಾಧ್ಯವಾಗಿದೆ. ಡಾ.ಆರ್.ಬಿಂದು, ಸಚಿವರು https://www.vijayavani.net/pp-sabhe-3 https://www.vijayavani.net/study-materials-launched-at-excel-college