ಸಂಶುಲ್ ಉಲಾಮ ಕಾಲೇಜಿನ ಗ್ರಂಥಾಲಯ ಉದ್ಘಾಟನೆ

6 vpt 1
ಎಸ್‌ಇಎ ಕಾಲೇಜಿನ ನೂತನ ಗ್ರಂಥಾಲಯವನ್ನು ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟಿಸಿದರು. ಮತೀನ್, ಜಾಲಿಲ್, ಬಶೀರ್ ಹಾಜಿ, ಇಸ್ಮಾಯಿಲ್ ಮುಸ್ಲಿಯಾರ್, ಹನೀಫ್ ಇದ್ದರು.
Published on

ವಿರಾಜಪೇಟೆ: ವಿರಾಜಪೇಟೆ ತಾಲೂಕು ಪೆರಂಬಾಡಿಯಲ್ಲಿರುವ ಎಸ್‌ಇಎ ಮಹಿಳಾ ಕಾಲೇಜಿನ ನೂತನ ಗ್ರಂಥಾಲಯವನ್ನು ಬುಧವಾರ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು.

ಮನುಷ್ಯನ ಜೀವನದಲ್ಲಿ ವಿದ್ಯಾಭ್ಯಾಸ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಶಾಲಾ-ಕಾಲೇಜುಗಳಲ್ಲಿ ಸಿಗುವ ಜ್ಞಾನದೊಂದಿಗೆ ಇಂತಹ ಗ್ರಂಥಾಲಯಗಳಲ್ಲಿ ಲಭ್ಯ ಇರುವ ಪ್ರಪಂಚದ ಎಲ್ಲ ಇತಿಹಾಸ ಹಾಗೂ ಪ್ರಸಕ್ತ ವಿದ್ಯಮಾನಗಳ ಪುಸ್ತಕಗಳನ್ನು ಓದುವ ಅಭಿರುಚಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಜೀವನದಲ್ಲಿ ಗುರಿ ತಲುಪಲು ಅಪಾರ ಜ್ಞಾನದ ಅವಶ್ಯಕತೆ ಇದ್ದು, ಇಂತಹ ಜ್ಞಾನವನ್ನು ಪಡೆದುಕೊಳ್ಳುವಲ್ಲಿ ಗ್ರಂಥಾಲಯಗಳು ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಹನೀಫ್, ತಾಲೂಕು ಘಟಕದ ಅಧ್ಯಕ್ಷರಾದ ರಫೀಕ್, ಪುರಸಭೆ ಸದಸ್ಯರಾದ ಮತೀನ್, ಜಾಲಿಲ್, ಬಶೀರ್ ಹಾಜಿ, ಇಸ್ಮಾಯಿಲ್ ಮುಸ್ಲಿಯಾರ್, ಅರ್ಜಿ ಗ್ರಾಪಂ ಅಧ್ಯಕ್ಷ ಫಾತಿಮಾ ಇತರರು ಇದ್ದರು.

ಚಿತ್ರ ಅಳವಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net