ಜೈಂಟ್ಸ್ ಶಾಲೆಯ ಸಂಸತ್ತಿನ ಉದ್ಘಾಟನೆ

New Giants New
Published on

ಹುಬ್ಬಳ್ಳಿ : ಗೋಕುಲ ರಸ್ತೆಯ ಜೈಂಟ್ಸ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ತಿನ ಉದ್ಘಾಟನೆ ಶುಕ್ರವಾರ ನೆರವೇರಿತು.

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಅಧ್ಯಕ್ಷ ಪರಶುರಾಮ ಉಟವಾಲೆ ಮಾತನಾಡಿ, ವಿದ್ಯಾರ್ಥಿಗಳಿಗೆ ನಾಯಕತ್ವ, ಶಿಸ್ತು ಮತ್ತು ಹೊಣೆಗಾರಿಕೆಯ ಮಹತ್ವ ತಿಳಿಸಿದರು.

ವಿದ್ಯಾರ್ಥಿಗಳಿಗೆ ಶಾಲಾ ಸಂಸತ್ತಿನ ಪಾತ್ರ ಹಾಗೂ ಅದರ ಉಪಯೋಗದ ಬಗ್ಗೆ ಲೆಕ್ಕ ಪರಿಶೋಧಕ ಎಂ.ಕೆ. ಬಾಬಜಿ ತಿಳಿಸಿದರು.

ವಿದ್ಯಾರ್ಥಿ ಮಂತ್ರಿಗಳಿಗೆ ಬ್ಯಾಡ್ಜ್ ಅನ್ನು ವಿತರಿಸಿ, ಅವರ ಜವಾಬ್ದಾರಿ, ಸಂಸತ್ತಿನ ನಿಯಮಗಳನ್ನು ಶಿಕ್ಷಕರು ವಿವರಿಸಿದರು.

ಶಾಲೆಯ ಕಾರ್ಯನಿರ್ವಹಣಾ ಅಧ್ಯಕ್ಷ ಎನ್.ಆರ್. ರವಿ, ಕಾರ್ಯದರ್ಶಿ ವಿಜಯ ಕುಲಕರ್ಣಿ, ಅಮಿತ ಬಾಬಜಿ, ಜಿ.ಎಸ್. ನಾಯಕ್, ಮಂಡಳಿ ಸದಸ್ಯರಾದ ವಿಜಯ ಪಟೇಲ, ಪ್ರವೀಣ ಮುತಾಲಿಕ, ಅಶೋಕ ವಕ್ಕುಂದ , ಆಡಳಿತಾಧಿಕಾರಿ ಉಮಾ ಪಾಟೀಲ, ಪ್ರಾಚಾರ್ಯ ಬಸವರಾಜ ಚಟ್ನಿ, ರೇಣುಕಾ ಕಥಕಲಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net