ಜಿಲ್ಲೆಯ ಮೊದಲ ಸಂಯೋಜಿತ ಕಲಿಕಾ ಕೇಂದ್ರ ಉದ್ಘಾಟನೆ

15 ckm 5
ಚಿಕ್ಕಮಗಳೂರಿನ ಸಾಯಿ ಏಂಜಲ್ಸ್ ಶಾಲೆಯಲ್ಲಿ ನೂತನವಾಗಿ ಆರಂಭಗೊAಡ ಜಿಲ್ಲೆಯ ಮೊದಲ ಸಂಯೋಜಿತ ಕಲಿಕಾ ಕೇಂದ್ರ ಉದ್ಘಾಟಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಸಿ.ರವೀಶ್ ಮಾತನಾಡಿದರು. ನಾಗೇಶ್, ಟಿ.ಸಿ.ಲೋಕೇಶ್, ಯಾಮಿನಿ ಸವೂರ್ ಉಪಸ್ಥಿತರಿದ್ದರು.
Published on

ಚಿಕ್ಕಮಗಳೂರು: ನಮ್ಮ ಸುತ್ತಲಿನ ಎಲ್ಲವೂ ತಂತ್ರಜ್ಞಾನ ಆಧಾರಿತವಾಗಿರುವಾಗ ನಮ್ಮ ಶಿಕ್ಷಣವೂ ಕೂಡ ಜ್ಞಾನ ಯುಗದಿಂದ ಡಿಜಿಟಲ್ ಯುಗಕ್ಕೆ ಪರಿವರ್ತನೆಯಾಗಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಸಿ.ರವೀಶ್ ತಿಳಿಸಿದರು.

ನಗರದ ಶ್ರೀಸಾಯಿ ಏಂಜಲ್ಸ್ ಶಾಲೆಯಲ್ಲಿ ನೂತನವಾಗಿ ಆರಂಭಗೊAಡ ಜಿಲ್ಲೆಯ ಮೊದಲ ಸಂಯೋಜಿತ ಕಲಿಕಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಶಿಕ್ಷಣವು ಶಿಕ್ಷಣ ಕ್ಷೇತ್ರದ ಎಲ್ಲ ಸಮಸ್ಯೆಗಳಿಗೆ ಪರಮೋಚ್ಛ ಪರಿಹಾರವಾಗಿದೆ. ಹೈಬ್ರಿಡ್ ಕಲಿಕೆಯಿಂದ ವಿದ್ಯಾರ್ಥಿಗಳು ತಜ್ಞರೊಂದಿಗೆ ಸಮರ್ಪಕ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಂಸ್ಥೆಯ ಸಂಸ್ಥಾಪಕಿ ವಿಜಯಾ ನಾಗೇಶ್ ಮಾತನಾಡಿ, ಹೈಬ್ರಿಡ್ ಕಲಿಕೆ ಮಕ್ಕಳ ಜ್ಞಾನ ವೃದ್ಧಿಗೆ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸಂಯೋಜಿತ ಕಲಿಕಾ ಕೇಂದ್ರವನ್ನು ತೆರೆಯಲು ಅವಕಾಶ ಮಾಡಿಕೊಟ್ಟಿರುವುದು ನಮಗೆ ಹೆಮ್ಮೆ ಎನಿಸುತ್ತದೆ ಎಂದು ತಿಳಿಸಿದರು.
ಶಾಲೆಯ ಪ್ರಾಚಾರ್ಯೆ ಯಾಮಿನಿ ಸವೂರ್ ಮಾತನಾಡಿ, ಹೈಬ್ರಿಡ್ ಕಲಿಕೆಯಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ ಹೆಚ್ಚಲು ಸಹಕಾರಿಯಾಗುತ್ತದೆ. ಸಂಯೋಜಿತ ಕಲಿಕೆಯ ವಿಧಾನಗಳು ಮುಖಾಮುಖಿ ಕಲಿಕೆಗಿಂತ ಹೆಚ್ಚು ಪರಿಣಾಮಕಾರಿ ಫಲಿತಾಂಶ ನೀಡುತ್ತದೆ. ಸಂಯೋಜಿತ ಕಲಿಕೆಯು ಶೈಕ್ಷಣಿಕ ವೆಚ್ಚಗಳನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಈ ವರ್ಚುಯಲ್ ಕಲಿಕಾ ಪರಿಸರ ಶಿಕ್ಷಕರನ್ನು ಭೌತಿಕವಾಗಿರದೆ ವಿದ್ಯಾರ್ಥಿಗಳೊಂದಿಗೆ ಸಂಪರ್ಕಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಯಿ ಏಂಜಲ್ ಸಂಸ್ಥೆಯ ಸಂಸ್ಥಾಪಕರಾದ ನಾಗೇಶ್, ಕಾರ್ಯದರ್ಶಿ ಎಂ.ಜೆ.ಕಾರ್ತಿಕ್, ಸಂಪನ್ಮೂಲ ವ್ಯಕ್ತಿ ಟಿ.ಸಿ.ಲೋಕೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net