

ಹುಬ್ಬಳ್ಳಿ: ಇಲ್ಲಿಯ ಗೋಪನಕೊಪ್ಪದ ದೊಂಬರ ಓಣಿಯಲ್ಲಿ ದೊಂಬರ ಸಮಾಜ ಕ್ಷೇಮಾಭಿವೃದ್ಧಿ ಸಂಘ ಹಾಗೂ ದೊಂಬರ ಸಮಾಜ ಮಹಿಳಾ ಸೇವಾ ಸಂಘವನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು.
ಸಮಾಜದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮಹಾಪೌರ ದಾನಪ್ಪ ಕಬ್ಬೇರ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಮಹೇಶ ಟೆಂಗಿನಕಾಯಿ, ಎಸಿಪಿ ಶಿವಪ್ರಕಾಶ ನಾಯಕ್, ಅಮ್ಮಿನಭಾವಿ ಸಿದ್ಧರಮಠದ ಶ್ರೀ ನಾಗೇಂದ್ರ ಸಾಮೀಜಿ, ಶ್ರೀ ಋಷಿಪುತ್ರ ಸ್ವಾಮೀಜಿ ರಂಗಾಪುರ, ಪಾಲಿಕೆ ಸದಸ್ಯರಾದ ಬೀರಪ್ಪ ಖಂಡೇಕರ, ಶಿವಕುಮಾರ ರಾಯನಗೌಡ್ರ, ಎಚ್.ಆರ್. ದಾಯಗೊಡಿ, ಪ್ರಮುಖರಾದ ಚಿದು ನರುಗಂದ, ಎಸ್.ಆರ್. ಪಾಟೀಲ, ಅಬ್ದುಲ್ ಗಣಿ ವಲಿ ಅಹ್ಮದ್, ಚೆನ್ನು ಡಿ.ಆರ್., ಡಿ. ಯಮನೂರ, ಆನಂದ ಬೇವಿನಕಟ್ಟಿ, ಸಮೀರ ಖಾನ್, ಮೋಹನ ಅಡರಕಟ್ಟಿ, ರಮೇಶ ಕೆಳಗಿನಮನಿ, ಕೃಷ್ಣ ಬ್ಯಾಡಗಿ, ದಿನೇಶ ಕಬ್ಬೇರ, ಸಿದ್ದಪ್ಪ ಹಂಚಿನಮನಿ, ಅಶೋಕ ಕಬ್ಬೇರ, ಮಂಜುಳಾ ಹೊಸಮನಿ, ರೇಖಾ ಕಬ್ಬೇರ ಇತರರು ಭಾಗವಹಿಸಿದ್ದರು.
ಭೋವಿವಡ್ಡರ ಸಮಾಜದ ಅಧ್ಯಕ್ಷ ನರೇಶ ಮಲೆನಾಡು ಅವರು ಬೇಡಿಕೆ ಸ್ವೀಕರಿಸಿ, ಸಚಿವರ ಗಮನಕ್ಕೆ ತಂದು ಪರಿಹರಿಸುವ ಭರವಸೆ ನೀಡಿದರು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಪ್ರಕಾಶ ಕಂಬಳಿ ಜಾನಪದ ಹಾಡು ಹಾಡಿದರು. ರಾಮು ಕಟ್ಟೇಣ್ಣವರ ವಂದಿಸಿದರು.