ಗಿಡಗಳನ್ನು ಬೆಳೆಸಿ ನಾವೂ ಬೆಳೆಯಬೇಕು, ತಾಪಂ ಮಾಜಿ ಸದಸ್ಯ ವೀರೇಶ ಸಜ್ಜನ ಸಲಹೆ

Sundarlal Bahuguna Green Force
ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗಿಡಗಳ ದತ್ತು ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಪ್ರಮುಖರಾದ ವೀರೇಶ, ಪರಶುರಾಮ, ದೇವಪ್ಪ, ಶಂಕ್ರಪ್ಪ, ಶರಣಪ್ಪ ಇತರರಿದ್ದರು.
Published on

ಅಳವಂಡಿ: ಪ್ರಸ್ತುತ ದಿನಮಾನಕ್ಕೆ ಪರಿಸರ ಸಂರಕ್ಷಣೆ ಅತಿ ಅವಶ್ಯ ಎಂದು ತಾಪಂ ಮಾಜಿ ಸದಸ್ಯ ವೀರೇಶ ಸಜ್ಜನ ತಿಳಿಸಿದರು.

ಸಮೀಪದ ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಂದರ್‌ಲಾಲ್ ಬಹುಗುಣ ಹಸಿರು ಪಡೆಯ ಉದ್ಘಾಟನೆ, ತಾಯಿಯ ಹೆಸರಿನಲ್ಲಿ ಒಂದು ಗಿಡ ಅಭಿಯಾನ ಅಂಗವಾಗಿ ಹಮ್ಮಿಕೊಂಡಿದ್ದ ಗಿಡಗಳ ದತ್ತು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು.

ಕಲಿಕೆಗೆ ಪರಿಸರ ಪೂರಕವಾಗಿದೆ. ಮಕ್ಕಳು ನೆಟ್ಟ ಗಿಡಗಳನ್ನು ಬೆಳೆಸಬೇಕು. ಅವುಗಳ ಬೆಳವಣಿಗೆ ನೋಡುತ್ತಾ ನಾವು ಬೆಳೆಬೇಕು ಮತ್ತು ಆನಂದಿಸಬೇಕು. ಶಾಲೆಯಲ್ಲಿ ಸುಂದರಲಾಲ್ ಬಹುಗುಣ ಹೆಸರಿನಲ್ಲಿ ಹಸಿರುಪಡೆ ಸ್ಥಾಪಿಸಿ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನಾರ್ಹ ಎಂದರು.

ಕಾರ್ಯಕ್ರಮ ಸಂಚಾಲಕ ಮರ್ದಾನಲಿ ಗಡಾದ ಮಾತನಾಡಿ, ಮಾನವ ಆಹಾರ, ನೀರು ಇಲ್ಲದೆ ಕೆಲ ದಿನ ಬದುಕಬಹುದು ಆದರೆ ಗಾಳಿ ಇಲ್ಲದೆ ಒಂದು ಕ್ಷಣ ಬದುಕಲು ಸಾಧ್ಯವಿಲ್ಲ. ಹೀಗಾಗಿ ಸೈನಿಕರು ದೇಶದ ಗಡಿ ಕಾಯ್ದು ನಮ್ಮನ್ನು ರಕ್ಷಣೆ ಮಾಡುವಂತೆ ವಿದ್ಯಾರ್ಥಿಗಳು ಗಿಡ ನೆಟ್ಟು ಪೋಷಿಸುವ ಮೂಲಕ ಪರಿಸರ ರಕ್ಷಣೆ ಮಾಡಬೇಕು ಎಂದರು.

ಮುಖ್ಯಶಿಕ್ಷಕರಾದ ದೇವಪ್ಪ ಬಚಕ್ಕನವರ, ಪರಶುರಾಮ ಸಾಲ್ಮನಿ, ಪ್ರಮುಖರಾದ ಶಂಕ್ರಪ್ಪ ಬಡಿಗೇರ, ಶರಣಪ್ಪ ಮಡಿವಾಳರ, ಶಿಕ್ಷಕರಾದ ಗಿರಿಯಪ್ಪ ಹಾರನಳ್ಳಿ, ರವಿಕಿರಣ ಟಿಕಾರೆ, ನಾರಾಯಣಪ್ಪ ಬಿಸನಳ್ಳಿ, ರಾಜಾಸಾಹೇಬ ಬಳಿಗಾರ, ಸೋಮಣ್ಣ, ಪರಶುರಾಮ, ಶ್ವೇತಾ, ಬಸವರಾಜ, ಸುನಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net