

ಮಂಡ್ಯ: ತಾಲೂಕಿನ ಗುಡಿಗೇನಹಳ್ಳಿ(ವೀರೇಗೌಡನಕೊಪ್ಪಲು) ಗ್ರಾಮದಲ್ಲಿ ವರಸಿದ್ದಿ ವಿನಾಯಕ ದೇವಸ್ಥಾನ ಲೋಕಾರ್ಪಣೆ ಹಾಗೂ ಕಳಶ ಸ್ಥಾಪನೆ ಸಮಾರಂಭ ಅದ್ದೂರಿಯಾಗಿ ನೆರವೇರಿತು.
ಭಾನುವಾರ ಗಣಪತಿ ಪೂಜೆ, ಸ್ವಸ್ತಿ ಪುಣ್ಯಹ, ಮಹಾಗಣಪತಿ ಹೋಮ ಸೇರಿದಂತೆ ಧಾರ್ಮಿಕ ಕೈಂಕರ್ಯ ನಡೆಯಿತು. ಸೋಮವಾರ ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಸಿದ್ದಲಿಂಗ ಮಹಾಸ್ವಾಮೀಜಿ ಅವರ ಸಾನಿಧ್ಯದಲ್ಲಿ ದೇವಸ್ಥಾನ ಲೋಕಾರ್ಪಣೆಗೊಂಡಿತು.
ಚಿಕ್ಕಮಗಳೂರು ದತ್ತ ಆಶ್ರಮದ ವಿನಯ್ ಗುರೂಜಿ ಮಾತನಾಡಿ, ಹೃದಯ ಶುದ್ಧಿ ಇದ್ದವರಿಗೆ ಬೇರೆ ಅವಶ್ಯಕತೆ ಇರುವುದಿಲ್ಲ. ನಮ್ಮ ಸಂಸ್ಕೃತಿ, ಆಚರಣೆ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮೀಣ ಭಾಗದಲ್ಲಿ ನಡೆಯುತ್ತದೆ ಎಂದರು.
ಚನ್ನಪಟ್ಟಣ ಬೇವೂರು ಮಠದ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ, ಶಾಸಕ ರವಿಕುಮಾರ್ ಗಣಿಗ, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಉದ್ಯಮಿ ಷಣ್ಮುಖಪ್ಪ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ತಿಮ್ಮೇಗೌಡ, ಜ್ಯೋತಿ ಮುದ್ದರಾಜು, ಪುಟ್ಟಯ್ಯ, ನಾಗರಾಜ, ಮಾಯಪ್ಪನಹಳ್ಳಿ ರಮೇಶ್, ವಿಜಯಲಕ್ಷ್ಮೀ, ಸುರೇಶ್, ಪ್ರಮೀಳಾ ಭೈರವ, ಯೋಗಾನಂದ, ಪ್ರದೀಪ್, ಅಶೋಕ್, ಶಿವಕುಮಾರ್, ಮಹದೇವು ಇದ್ದರು.
ಸಮಾರಂಭಕ್ಕೆ ಆಗಮಿದ ಗಣ್ಯರನ್ನು ಜಾನಪದ ಕಲಾತಂಡದೊಂದಿಗೆ ವೇದಿಕೆಗೆ ಕರೆ ತರಲಾಯಿತು. ಕಾರ್ಯಕ್ರಮದ ಅಂಗವಾಗಿ ಸಹಸ್ರಾರೂ ಭಕ್ತರಿಗೆ ಅನ್ನದಾಸೋಹ ಮಾಡಲಾಗಿತ್ತು.