ಮಕ್ಕಳಲ್ಲಿ ಆದರ್ಶ ಮೌಲ್ಯ ಬೆಳೆಸಿ

30BK4
ಬಸವಕಲ್ಯಾಣದ ದೊಡ್ಡಪ್ಪ ಅಪ್ಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಾಗತ ಮತ್ತು ಪ್ರತಿಭಾನ್ವೇಷಣಾ ಕಾರ್ಯಕ್ರಮವನ್ನು ಅಗ್ನಿಶಾಮಕ ಠಾಣಾ ಅಧೀಕ್ಷಕ ಪ್ರವೀಣಕುಮಾರ ಕಲಶೆಟ್ಟಿ ಉದ್ಘಾಟಿಸಿದರು. ರಾಚಯ್ಯ ಮಠಪತಿ, ಸಂಗೀತಾ ಕೋಳೂರು, ನಿಲೇಶಕುಮಾರ ಟೊಂಪೆ ಇತರರಿದ್ದರು.
Published on

ಬಸವಕಲ್ಯಾಣ: ಇಂದಿನ ತಾಂತ್ರಿಕ ಯುಗದಲ್ಲಿ ಮಕ್ಕಳಲ್ಲಿ ಮೌಲ್ಯಗಳು ಕಡಿಮೆಯಾಗುತ್ತಿದ್ದು, ಅವರಲ್ಲಿ ಆದರ್ಶ ಮೌಲ್ಯಗಳನ್ನು ಬೆಳೆಸಿ ಸಧೃಢವಾದ ಭಾರತ ನಿರ್ಮಾಣ ಮಾಡುವ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಅಗ್ನಿಶಾಮಕ ಠಾಣಾ ಅಧೀಕ್ಷಕ ಪ್ರವೀಣಕುಮಾರ ಕಲಶೆಟ್ಟಿ ಹೇಳಿದರು.

ನಗರದ ದೊಡ್ಡಪ್ಪ ಅಪ್ಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಾಗತ ಮತ್ತು ಪ್ರತಿಭಾನ್ವೇಷಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ತಮ ವಿದ್ಯಾಭ್ಯಾಸ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿ ಉತ್ತಮ ಪ್ರತಿಫಲವನ್ನೆ ಪಡೆಯುತ್ತಾನೆ. ಆದ್ದರಿಂದ ಶಿಕ್ಷಕರಾದವರು ಉತ್ತಮ ಶಿಕ್ಷಣದ ಜತೆಗೆ ಉತ್ತಮ ಸ್ಪರ್ಧಾತ್ಮಕ ಮನೋಭಾವ ಬೆಳೆಸಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ರಾಚಯ್ಯ ಮಠಪತಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಮಕ್ಕಳು ಇಂದು ಶಿಕ್ಷಕರಾಗಿ ಸೇವೆ ಸಲ್ಲಿಸತ್ತಿದ್ದಾರೆ. ಉತ್ತಮ ಶಿಕ್ಷಣದ ಜತೆಗೆ ಉತ್ತಮ ಮೌಲ್ಯಗಳನ್ನು ಬೆಳೆಸುವುದು ಹಾಗು ಸ್ವಾವಲಂಭಿ ಜೀವನ ನಡೆಸುವಂತಾಗಬೇಕು ಎಂಬುದೇ ಸಂಸ್ಥೆಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಉಪನ್ಯಾಸಕರಾದ ಸಂಗೀತಾ ಕೋಳೂರು, ನಿಲೇಶಕುಮಾರ ಟೊಂಪೆ, ಬಸವರಾಜ ಸೇರಿ, ಕವಿತಾ ಮಠಪತಿ, ಕೈಲಾಸ ಮಂಗಲಗಿ, ಬಸವರಾಜ ಗೋನಾಕಿ, ಶಿವಾನಂದ ಬಿರಾದರ, ಸಂಜೀವಕುಮಾರ ಪೂಜಾರಿ, ಬಸವರಾಜ ಕಾಸ್ಗೆ, ರಮೇಶ ಗರುಡಕರ್, ಮಿಥಿಲಾ ಬಿರಾದಾರ, ಪ್ರಶಿಕ್ಷಣಾರ್ಥಿಗಳಾದ ಪರಶುರಾಮ, ಶ್ರೀಕೃಷ್ಣ, ಭಾಗ್ಯಶ್ರೀ, ಶ್ರೀಕಾಂತ, ಸಾವಿತ್ರಿ, ಪ್ರಿಯಾ ಮತ್ತು ಐಶ್ವರ್ಯ ಇತರರಿದ್ದರು.

ಆಕಾಶ ಬೊಮ್ಮನಹಳ್ಳಿ ಸ್ವಾಗತಿಸಿದರು. ಮಹಾದೇವಿ ಪೂಜಾರಿ ವಂದಿಸಿದರು. ರೇಣುಕಾ ಮತ್ತು ಪೂರ್ಣಿಮಾ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net