ಸಂಡೇ ಸ್ಪೋರ್ಟ್ಸ್ ಕ್ಲಬ್ ಉದ್ಘಾಟನೆ

13
Published on


ಮೈಸೂರು: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಂಡೇ ಸ್ಪೋರ್ಟ್ಸ್ ಕ್ಲಬ್ ಅನ್ನು ಬುಧವಾರ ಚಿತ್ರ ನಟ ಆದಿ ಲೋಕೇಶ್ ಉದ್ಘಾಟಿಸಿದರು.

ಕೆಪಿಟಿಸಿಎಲ್ ಹಾಗೂ ಸೆಸ್ಕ್ ನೌಕರರು ಕಾರ್ಯದೊತ್ತಡದ ನಡುವೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ, ಮನಸ್ಸಿಗೆ ನೆಮ್ಮದಿ ತಂದುಕೊಳ್ಳಬೇಕು. ಅಲ್ಲದೆ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಂಡೇ ಕ್ಲಬ್ ಕ್ರೀಡಾ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸಿಕೊಂಡು ದೊಡ್ಡ ಮಟ್ಟದಲ್ಲಿ ಬೆಳೆಯುವಂತಾಗಲಿ ಎಂದು ಆದಿ ಲೋಕೇಶ್ ಆಶಿಸಿದರು.

ಕ್ಲಬ್ ಅಧ್ಯಕ್ಷ ಎಂ.ಸುರೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಗೋಪಾಲಕೃಷ್ಣ, ಕಾರ್ಯದರ್ಶಿ ಎ.ಎಸ್.ಅಶೋಕ್, ಖಜಾಂಚಿ ಪೃಥ್ವಿರಾಜ್, ಕ್ರೀಡಾ ಕಾರ್ಯದರ್ಶಿ ಪ್ರಶಾಂತ್ ಕುಮಾರ್, ಸಂ.ಕಾರ್ಯದರ್ಶಿ ನಿತ್ಯಾನಂದ, ಕ್ಲಬ್‌ನ ನಿರ್ದೇಶಕರು, ಕೆಪಿಟಿಸಿಎಲ್ ಹಾಗೂ ಸೆಸ್ಕ್ ಅಧಿಕಾರಿಗಳು, ನೌಕರರ ಸಂಘದ ಅಧ್ಯಕ್ಷರು-ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net