ಸಹಕಾರಿ ಸಂಘ ಎಲ್ಲ ಸೌಲಭ್ಯ ನೀಡುವ ಕೇಂದ್ರ : ಡಾ.ಎಂ.ಎನ್.ರಾಜೇಂದ್ರಕುಮಾರ್ ಶ್ಲಾಘನೆ

New Project (25)
Published on

ವಿಜಯವಾಣಿ ಸುದ್ದಿಜಾಲ ಸುಳ್ಯ

ಗ್ರಾಮಗಳ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಹಕಾರಿ ಸಂಘಗಳು ಇಂದು ಜನರ ಎಲ್ಲ ಅಗತ್ಯಗಳನ್ನು ಪೂರೈಸುವ ಕೇಂದ್ರಗಳಾಗಿ ಮಾರ್ಪಾಡಾಗಿರುವುದು ಹೆಮ್ಮೆಯ ವಿಷಯ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಹೇಳಿದರು.

ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ(ಸಿ.ಎ ಬ್ಯಾಂಕ್) ಶತಮಾನೋತ್ತರ ದಶಮಾನೋತ್ಸವ ಅಂಗವಾಗಿ ನಿರ್ಮಾಣಗೊಂಡ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಅಧ್ಯಕ್ಷರು ಹಾಗೂ ಮಾಜಿ ಸಿಬ್ಬಂದಿಯನ್ನು ಮಾಜಿ ಮುಖ್ಯಮಂತ್ರಿ ಡಿ.ವಿಸದಾನಂದ ಗೌಡ ಸನ್ಮಾನಿಸಿದರು. ಸಿ.ಎ ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಎ.ವಿ. ಅಧ್ಯಕ್ಷತೆ ವಹಿಸಿದ್ದರು. ಶಾಸಕಿ ಭಾಗೀರಥಿ ಮುರುಳ್ಯ, ದ.ಕ. ಮಾಜಿ ಸಂಸದ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೋಟ್ಟು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಸ್.ಎನ್.ಮನ್ಮಥ, ಎಸ್.ಬಿ.ಜಯರಾಮ ರೈ, ಸುಳ್ಯ ನಪಂ ಅಧ್ಯಕ್ಷೆ ಶಶಿಕಲಾ ಎ. ನೀರಬಿದಿರೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಎಸ್.ಪಿ., ನಿರ್ದೇಶಕರಾದ ಎನ್.ಎ.ರಾಮಚಂದ್ರ, ಪ್ರಬೋದ್ ಶೆಟ್ಟಿ ಮೇನಾಲ, ವೆಂಕಟ್ರಮಣ ಮುಳ್ಯ, ಶಿವರಾಮ ಕೇರ್ಪಳ, ವಾಸುದೇವ ನಾಯಕ್ ಪುತ್ತಿಲ, ಹರಿಣಾಕ್ಷಿ ರೈ ಬೇಲ್ಯ, ಕೇಶವ ಸಿ.ಎ.ಹೊಸಗದ್ದೆ, ಚಂದ್ರಶೇಖರ ಡಿ.ಕೆ., ಬಾಲಗೋಪಾಲ ಸೇರ್ಕಜೆ, ಹೇಮಂತ್ ಕುಮಾರ್ ಕಂದಡ್ಕ ಉಪಸ್ಥಿತರಿದ್ದರು. ಅಚ್ಚುತ ಅಟ್ಲೂರು, ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬ್ಯಾಂಕ್ ಉಪಾಧ್ಯಕ್ಷ ಚಂದ್ರಶೇಖರ ಸೋಣಂಗೇರಿ ವಂದಿಸಿದರು.

ಕೇಂದ್ರ ಸರ್ಕಾರ ಸಹಕಾರಿ ಕ್ಷೇತ್ರವನ್ನು ಆದ್ಯತಾ ವಲಯವಾಗಿ ಮಾಡಿ, ಅಭಿವೃದ್ಧಿಗೆ ನಿರಂತರ ಪ್ರಯತ್ನ ನಡೆಸುತ್ತಿದೆ. ಸಹಕಾರಿ ವಿಶ್ವ ವಿದ್ಯಾಲಯ ಸ್ಥಾಪಿಸಿ ಪ್ರತಿ ವರ್ಷ 8 ಲಕ್ಷ ಜನರನ್ನು ಸಹಕಾರಿ ತರಬೇತಿ ನೀಡುವ ಯೋಜನೆ ಇದೆ. ಸಹಕಾರಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಿ ಸಹಕಾರಿ ಕ್ಷೇತ್ರದ ಮೂಲಕ ದೇಶ ಕಟ್ಟುವ ಕೆಲಸ ನಡೆಯುತ್ತಿದೆ. ಕ್ಯಾ.ಬ್ರಿಜೇಶ್ ಚೌಟ ಸಂಸದ https://www.vijayavani.net/mahavir-jayanti-at-moodbidri-excellent https://www.vijayavani.net/free-health-check-up-camp-10

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net