

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ಹರಿಖಂಡಿಗೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಕಾಶೀ ಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಮೊಕ್ಕಾಂ ಮತ್ತು ಶ್ರೀ ಸುಧೀಂದ್ರ ತೀರ್ಥ ಸಭಾಭವನ ಉದ್ಘಾಟನೆ ಜೂ.4ರಂದು ನಡೆಯಲಿದೆ.
ಬುಧವಾರ ಸಂಜೆ ಕಲ್ಯಾಣಪುರ ಮೊಕ್ಕಾಂನಿಂದ ಸ್ವಾಮೀಜಿ ಪುರಪ್ರವೇಶ ಮಾಡುವರು. ಶ್ರೀ ದೇವರ ಭೇಟಿ, ಸಂಸ್ಥಾನ ದೇವರ ಪೂಜಾಗೃಹ ಉದ್ಘಾಟನೆ ಹಾಗೂ ಶ್ರೀ ಸುಧೀಂದ್ರತೀರ್ಥ ಸಭಾಭವನದ ಉದ್ಘಾಟನೆ, ಹತ್ತು ಸಮಸ್ತರಿಂದ ಪಾದಪೂಜೆ, ಸ್ವಾಗತ ಸಭಾ, ಸ್ವಾಮೀಜಿಯವರಿಂದ ಆಶೀರ್ವಚನ ನಡೆಯಲಿದೆ.
5ರಂದು ಮಠದಲ್ಲಿ ಸಂಸ್ಥಾನ ದೇವರಿಗೆ ಉಷಾ ಪೂಜೆ, ಶ್ರೀ ಸಂಯಮೀಂದ್ರ ಸ್ವಾಮೀಜಿಯವರ ಆಶ್ರಮ ಸ್ವೀಕಾರ ದಿನದ ಆಚರಣೆ, ಶ್ರೀ ಸಂಸ್ಥಾನ ದೇವರಿಗೆ ಲು ವಿಷ್ಣು ಪವವಾನ ಕಲಶಾಭಿಷೇಕ, ನವಗ್ರಹಯುಕ್ತ ಮೃತ್ಯುಂಜಯ ಹವನ, ಮಹಾಪೂಜೆ, ಸಂಸ್ಥಾನ ದೇವರಿಗೆ ಮಹಾಪೂಜೆ, ಭಿಕ್ಷಾ ಸೇವೆ ಭೂರಿ ಸವಾರಾಧನೆ, ಮಠದಲ್ಲಿ ರಾತ್ರಿ ಪೂಜೆ, ಪಂಡಿತ್ ಜಯತೀರ್ಥ ಮೇವುಂಡಿ ಹುಬ್ಬಳ್ಳಿ ಇವರಿಂದ ಸಂತವಾಣಿ ನಡೆಯಲಿದೆ.
6ರಂದು ಶ್ರೀ ಸಂಸ್ಥಾನ ದೇವರಿಗೆ ಉಷಾ ಪೂಜೆ, ಶ್ರೀ ದೇವರಿಗೆ ಪ್ರಸನ್ನ ಪೂಜೆ ನೆರವೇರಿಸುವ ಸ್ವಾಮೀಜಿಗಳು, ನಂತರ ಮಠದಲ್ಲಿ 48 ಗಂಟೆಗಳ ಅಖಂಡ ಭಜನೆಗೆ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮಧ್ಯಾಹ್ನ ಶ್ರೀ ದೇವರಿಗೆ ತುಳಸಿ ಅರ್ಚನೆ, ಮಠದಲ್ಲಿ ಪವವಾನ ಕಲಶಾಭಿಷೇಕ, ಮಹಾಪೂಜೆ, ಏಕಾದಶಿ ಪ್ರಯುಕ್ತ ಫಲಾಹಾರ, ಸಂಸ್ಥಾನ ದೇವರಿಗೆ ರಾತ್ರಿ ಪೂಜೆ, ಫಲಾಹಾರ ನಡೆಯಲಿದೆ.
7ರಂದು ಶ್ರೀ ಸಂಸ್ಥಾನ ದೇವರಿಗೆ ಉಷಾಪೂಜೆ, ಅತಿರಿಕ್ತೋಪವಾಸ, ತಪ್ತ ಮುದ್ರಾಧಾರಣೆ, ಮಧ್ಯಾಹ್ನ ಶ್ರೀ ಸಂಸ್ಥಾನ ದೇವರಿಗೆ ಪವವಾನ ಕಲಶಾಭಿಷೇಕ, ಸಂಸ್ಥಾನ ದೇವರಿಗೆ ಮಹಾಪೂಜೆ ಹಾಗೂ ರಾತ್ರಿ ಪೂಜೆ ಜರುಗಲಿದೆ.
8ರಂದು ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ನಕ್ಷತ್ರ ಪ್ರಯುಕ್ತ ಶ್ರೀ ದೇವರಿಗೆ ಲು ವಿಷ್ಣು ಹವನ, ಮೂಲ ಮಂತ್ರ ಹವನ, ಶ್ರೀಗಳಿಂದ ಪೂರ್ಣಾಹುತಿ, ಶ್ರೀ ಸಂಸ್ಥಾನ ದೇವರಿಗೆ ವಿಶೇಷ ಶತಪವವಾನ ಕಲಶಾಭಿಷೇಕ, ಮಹಾಪೂಜೆ, ಭಿಕ್ಷಾ ಸೇವೆ, ಸವಾರಾಧನೆ, ಸಂಜೆ ಶ್ರೀ ಸುಧೀಂದ್ರ ತೀರ್ಥರ ಭಾವಚಿತ್ರದೊಂದಿಗೆ ದೊಡ್ಡ ಪಲ್ಲಕ್ಕಿ ಉತ್ಸವ, ರಾತ್ರಿ ಶ್ರೀ ಸಂಯಮೀಂದ್ರ ಸ್ವಾಮೀಜಿ ಉಪಸ್ಥಿತಿಯಲ್ಲಿ ಶ್ರೀ ದೇವರಿಗೆ ವಿಶೇಷ ರಂಗಪೂಜೆ, ಸಭಾ ಕಾರ್ಯಕ್ರಮ ಜರುಗಲಿದೆ.
9ರಂದು ಮಠದಲ್ಲಿ ಉಷಾಪೂಜೆ, ದೇವರಿಗೆ ಭಜನೆ ಸಂಕೀರ್ತನೆಯೊಂದಿಗೆ ಅಷ್ಟೋತ್ತರ ಶತ ಪ್ರದಕ್ಷಿಣೆ ನಮಸ್ಕಾರ, ಮಹಾಪೂಜೆ, ಮಠದಲ್ಲಿ ಮಧ್ಯಾಹ್ನ ಪೂಜೆ, ರಾತ್ರಿ ಪೂಜೆ, ಭಿಕ್ಷಾ ಸೇವೆ, ಪಾದಪೂಜೆ, ಸವಾರಾಧನೆ ನಡೆಯಲಿದೆ. ಸಂಜೆ ಶ್ರೀಗಳನ್ನು ಮುಂದಿನ ಮೊಕ್ಕಾಂಗಾಗಿ ಬೆಳ್ತಂಗಡಿ ಲಾಲ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಬೀಳ್ಕೊಡಲಾಗುವುದು ಎಂದು ಆಡಳಿತ ಮೊಕ್ತೇಸರ ಎಂ.ದಿನೇಶ್ ಪೈ ಮತ್ತು ಶ್ರೀ ಸುಧಿಂದ್ರ ತೀರ್ಥ ಕಲಾಮಂದಿರ ಜೀರ್ಣೋದ್ಧಾರ ಮಂಡಳಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.