ಅಧ್ಯಯನ ಪೀಠದ ಉದ್ಘಾಟನೆ 28ರಂದು

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿಶ್ವ ವಿದ್ಯಾಲಯದ ಆದಿಕವಿ ಪಂಪ ಅಧ್ಯಯನ ಪೀಠ ಮತ್ತು ಡಾ. ಆರ್​.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಆಶ್ರಯದಲ್ಲಿ ಆದಿಕವಿ ಪಂಪ ಅಧ್ಯಯನ ಪೀಠ ಉದ್ಘಾಟನೆ, ಗ್ರಂಥಗಳ ಲೋಕಾರ್ಪಣೆ, ಆದಿಕವಿ ಪಂಪನ ಭಾವಚಿತ್ರ ಅನಾವರಣ ಮತ್ತು ಪಂಪ ವ್ಯಾಖ್ಯಾನ ಮಾಲೆ ಉದ್ಘಾಟನೆ ಸಮಾರಂಭವನ್ನು ಆ. 28ರಂದು ಬೆಳಗ್ಗೆ 11.30ಕ್ಕೆ ಕರ್ನಾಟಕ ವಿಶ್ವ ವಿದ್ಯಾಲಯದ ಡಾ. ಆರ್​.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಆಯೋಜಿಸಲಾಗಿದೆ.
ವಿದ್ವಾಂಸ ಡಾ.ಹಂಪ ನಾಗರಾಜಯ್ಯ ಕಾರ್ಯಕ್ರಮ ಉದ್ಘಾಟಿಸುವರು. ಕವಿವಿ ಕುಲಪತಿ ಡಾ. ಕೆ.ಬಿ. ಗುಡಸಿ ಪಂಪ ಕವಿಯ ಭಾವಚಿತ್ರ ಅನಾವರಣಗೊಳಿಸುವರು. ಕವಿವಿ ಕುಲಸಚಿವ ಡಾ. ಎ. ಚನ್ನಪ್ಪ ಗ್ರಂಥಗಳ ಲೋಕಾರ್ಪಣೆ ಮಾಡುವರು. ಮೌಲ್ಯಮಾಪನ ಕುಲಚಿವ ಡಾ. ಎನ್​.ವೈ. ಮಟ್ಟಿಹಾಳ ಪಂಪ ವ್ಯಾಖ್ಯಾನ ಮಾಲೆ ಉದ್ಘಾಟಿಸುವರು. ಕವಿವಿ ಹಣಕಾಸು ಅಧಿಕಾರಿ ಡಾ. ಸಿ. ಕೃಷ್ಣಮೂರ್ತಿ ಅತಿಥಿಯಾಗಿ ಭಾಗವಹಿಸುವರು. ಡಾ. ಆರ್​.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಡಾ. ಕೃಷ್ಣ ನಾಯಕ ಅಧ್ಯಕ್ಷತೆ ವಹಿಸುವರು ಎಂದು ಆದಿಕವಿ ಪಂಪ ಅಧ್ಯಯನ ಪೀಠದ ಸಂಯೋಜಕ ಡಾ.ಜೆ.ಎಂ.ನಾಗಯ್ಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net