ವಿಶ್ವಮಾನವ ಕುವೆಂಪು ಶಾಲೆಯಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ
Published on:
Copied
Follow Us
ಸೋಮವಾರಪೇಟೆ : ಚೌಡ್ಲು ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಸಂಘದ ಉದ್ಘಾಟನೆ ಶಾಲಾ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಶಾಲಾ ನಾಯಕಿ ಕೆ.ಸಿ.ಪಂಚಮಿ, ಕ್ರೀಡಾನಾಯಕಿ ಎಚ್.ಆರ್.ದಿಶಿತಾ, ಸಾಂಸ್ಕೃತಿಕ, ಶಿಸ್ತು, ಆರೋಗ್ಯ ವಿಭಾಗದ ನಾಯಕಿಯರುಗಳಾಗಿ ಬಿ.ಎಚ್.ನೀತಾ, ಸಿ.ಎಸ್.ಆದ್ವಿ, ತ್ರೀಶಾಲಗೌಡ, ಸಹಾಯಕ ನಾಯಕರುಗಳಾಗಿ ಪ್ರತೀಕ್, ಸೃಜನ್, ಆದಿತ್ಯ, ದಿಶಾಂತ್, ಜಿತನ್ ಅವರು ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಚೌಡ್ಲು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಟಿ.ಪರಮೇಶ್ ಮಾತನಾಡಿ, ವಿದ್ಯಾರ್ಥಿ ಜೀವನವನ್ನು ಜ್ಞಾನ ಸಂಪಾದನೆಗೆ ಮುಡಿಪಾಗಿಡಬೇಕು. ಕಲಿಕೆಯ ಸಮಯವನ್ನು ವ್ಯರ್ಥ ಮಾಡಬಾರದು. ಇವತ್ತು ಕಲಿತ ವಿದ್ಯೆ ಮುಂದೆ ನಿಮಗೆ ಉನ್ನತ ಹುದ್ದೆಯನ್ನು ಕಲ್ಪಿಸಿಕೊಡುತ್ತದೆ ಎಂದು ಕಿವಿಮಾತು ಹೇಳಿದರು.
ಶಾಲೆಯ ಮುಖ್ಯಶಿಕ್ಷಕಿ ಮಿಲ್‌ಡ್ರೆಡ್ ಗೋನ್ಸಾಲ್ವೆಸ್, ಉಪಾನ್ಯಾಸಕರಾದ ರಜಿತ್‌ಗಾಂಧಿ, ಲಾಂಚನ್ ಕಾರೇಕರ್, ದಿವ್ಯಾ ಇತರರು ಇದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಾದ ರೆಚಾನ, ಸಿರಿ, ರಿಶಾ ಕಾರ್ಯಕ್ರಮ ನಿರ್ವಹಿಸಿದರು.