ಕುಂದಾಪುರ ಸೇಂಟ್ ಮೇರಿಸ್ ಕಾಲೇಜಿನ ವಿದ್ಯಾರ್ಥಿ ಸಂಸತ್ ಉದ್ಘಾಟನೆ

samsathu
ಕುಂದಾಪುರದ ಸೇಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಸತ್ತು ಉದ್ಘಾಟಟನೆ ನೆರವೇರಿತು
Published on

ಗಂಗೊಳ್ಳಿ: ಕುಂದಾಪುರದ ಸೇಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಸತ್ ಉದ್ಘಾಟನಾ ಕಾರ್ಯಕ್ರಮ ಮಂಗಳವಾರ ನಡೆಯಿತು. ಕುಂದಾಪುರ ಚರ್ಚ್ ಧರ್ಮಗುರು ಪಾವ್ಲ್ ರೇಗೊ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಚರ್ಚ್ ಧರ್ಮಗುರು ತೋಮಸ್ ರೋಶನ್ ಡಿಸೋಜ, ಪತ್ರಕರ್ತ ಬರ್ನಾರ್ಡ್ ಡಿಕೋಸ್ತಾ, ಪ್ರಾಂಶುಪಾಲೆ ರೇಶ್ಮಾ ಫರ್ನಾಂಡಿಸ್, ಸಂಸತ್ ವಿದ್ಯಾರ್ಥಿ ಮಂತ್ರಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾದ ವಿದ್ಯಾರ್ಥಿ ಮಹಮ್ಮದ್ ಅಫ್ರಾನ್ ಕೃತಜ್ಞತೆ ಸಲ್ಲಿಸಿದರು. ಉಪನ್ಯಾಸಕಿ ಪಲ್ಲವಿ ಸ್ವಾಗತಿಸಿದರು. ವಿದ್ಯಾರ್ಥಿಪರಿಷತ್ ಕಾರ್ಯದರ್ಶಿ ಜೊನಿಟಾ ಮೆಂಡೊನ್ಸಾ ವಂದಿಸಿದರು. ವಿದ್ಯಾರ್ಥಿ ಆಲಿಸ್ಟನ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net