ಹಬ್ಬದಂತೆ ಆಚರಣೆಯಾಗಲಿ ಶ್ರೀರಾಮ ಮಂದಿರ ಉದ್ಘಾಟನೆ

HKR MANTRAKSHATE
Published on

ಹಿರೇಕೆರೂರ: ಅಯೋಧ್ಯೆಯಲ್ಲಿ ಜ. 22ರಂದು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಮಂದಿರ ಉದ್ಘಾಟನೆಗೊಳ್ಳಲಿದ್ದು, ಅಂದು ಪ್ರತಿಯೊಬ್ಬರೂ ತಮ್ಮ ಮನೆ ಮುಂದೆ ದೀಪ ಹಚ್ಚುವ ಮೂಲಕ ಶುಭಗಳಿಗೆಯನ್ನು ಶ್ರದ್ಧಾಭಕ್ತಿ ಹಾಗೂ ಶಾಂತಿಯಿಂದ ಹಬ್ಬದಂತೆ ಆಚರಿಸಬೇಕು ಎಂದು ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ ಹೇಳಿದರು.

ಪಟ್ಟಣದಲ್ಲಿ ಅಯೋಧ್ಯೆಯಿಂದ ಕಳುಹಿಸಿದ ಮಂತ್ರಾಕ್ಷತೆಯನ್ನು ಮನೆ ಮನೆಗಳಿಗೆ ಮುಟ್ಟಿಸುವ ಕಾರ್ಯಕ್ಕೆ ವಿವೇಕಾನಂದ ನಗರದಲ್ಲಿ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು. ಅಂದು ಪ್ರತಿಯೊಬ್ಬ ಹಿಂದುಗಳಿಗೆ ಅತ್ಯಂತ ಮಹತ್ವವಾದ ದಿನವಾಗಿದ್ದು, ಎಲ್ಲರೂ ಪಕ್ಷ ಭೇದ ಮರೆತು ತಮ್ಮ ಮನೆಗಳ ಮುಂದೆ ದೀಪ ಹಚ್ಚುವ ಮೂಲಕ, ನಿಮಗೆ ನೀಡಿರುವ ಮಂತ್ರಾಕ್ಷತೆಯನ್ನು ಶ್ರದ್ಧಾಭಕ್ತಿಯಿಂದ ಶ್ರೀರಾಮನ ಹೆಸರಿನಲ್ಲಿ ಪೂಜಿಸಬೇಕು ಎಂದರು. ಸಿ.ಬಿ. ಮಾಳಗಿ, ಉಮೇಶ ಬಣಕಾರ, ರುದ್ರಗೌಡ ನೀಲನಗೌಡ್ರ, ಶಂಕರ ತಿರಕಪ್ಪನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net