ಶ್ರೀ ಕಟ್ಟಿನ ಚೌಡೇಶ್ವರಿ ದೇಗುಲ ಉದ್ಘಾಟನೆ

ldh temple
ಎನ್.ಬಿ ಕಾಲನಿ ಗ್ರಾಮದ ಶ್ರೀ ಕಟ್ಟಿನ ಚೌಡೇಶ್ವರಿ ದೇವಾಲಯದ ಉದ್ಘಾಟನೆಯಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಪೂಜೆ ಸಲ್ಲಿಸಿದರು.
Published on

ಲಿಂಗದಹಳ್ಳಿ: ನಂದಿಬಟ್ಟಲು ಗ್ರಾಮದಲ್ಲಿ 15 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಶ್ರೀ ಕಟ್ಟಿನ ಚೌಡೇಶ್ವರಿ ದೇವಾಲಯವನ್ನು ಶುಕ್ರವಾರ ಉದ್ಘಾಟಿಸಲಾಯಿತು.

ಎನ್.ಬಿ.ಕಾಲನಿ ಗ್ರಾಮದಲ್ಲಿ ನಡೆಯುವ ವಿವಿಧ ಹಬ್ಬಗಳಲ್ಲಿ ಕಲ್ಲತ್ತಿಗಿರಿಯಲ್ಲಿ ನೆಲೆಸಿರುವ ಶ್ರೀ ಕಟ್ಟಿನ ಚೌಡೇಶ್ವರಿ ದೇವಿಯನ್ನು ಗ್ರಾಮಕ್ಕೆ ಕರೆತಂದು ಪೂಜೆ ಸಲ್ಲಿಸಿ ವಾಪಸ್ ಕಳುಹಿಸಬೇಕಿತ್ತು. ದೇವಿಯ ವಿಗ್ರಹದ ಮೇಲೆ ಬೆಲೆ ಬಾಳುವ ಆಭರಣಗಳು ಇರುವುದರಿಂದ ದೇವಿಯನ್ನು ಕರೆತರುವ ಸಂದರ್ಭದಲ್ಲಿ ಹೆಚ್ಚಿನ ಬಂದೋಬಸ್ತ್ ಮಾಡಿಕೊಳ್ಳಬೆಕಿತ್ತು. ಆದ್ದರಿಂದ ಗ್ರಾಮಸ್ಥರೆಲ್ಲರೂ ಸೇರಿ ಗ್ರಾಮದಲ್ಲೇ ದೇವಿಯ ದೇವಾಲಯ ನಿರ್ಮಿಸಿದರು. ಜಗದೀಶಾಚಾರ್ ಶಿವಾಚಾರ್ಯ ನೇತೃತ್ವದಲ್ಲಿ ವಿವಿಧ ಹೋಮ, ದೇವಾಲಯದ ಕಲಶಾಭಿಷೇಕ ನೇರವೇರಿಸಿ ಶ್ರೀ ಕಟ್ಟಿನ ಚೌಡೇಶ್ವರಿ ದೇವಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ಶಾಸಕ ಜಿ.ಎಚ್.ಶ್ರೀನಿವಾಸ್ ಅವರು ದೇವಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮದ ಕೋಟೆ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ, ವರ್ತೆಗುಂಡಿ ಶ್ರೀ ಸಿದ್ದೇಶ್ವರ ಸ್ವಾಮಿ ಸೇರಿದಂತೆ ಎಲ್ಲ ದೇವಾಲಯಗಳಲ್ಲೂ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಭಕ್ತರಿಂದಲೇ ದೇವಾಲಯ ಅಭಿವೃದ್ಧಿ ಹೊಂದುತ್ತಿದೆ ಎಂದರು.
ದೇವಾಲಯ ಸಮಿತಿ ಅಧ್ಯಕ್ಷ ಆರ್.ಸುರೇಶ್, ಕಾರ್ಯದರ್ಶಿ ಅವಿನಾಶ್, ಅಂಚೆ ಮಂಜುನಾಥ್, ನಂದಿಬಟ್ಟಲು ಗ್ರಾಪಂ ಅಧ್ಯಕ್ಷ ಅಬುಬಕ್ ಕುಟ್ಟಿ, ಮುಖಂಡರಾದ ಆರ್.ರಾಮಯ್ಯ, ಆರ್. ಕೃಷ್ಣಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net