ಸೌತಡ್ಕ ಜ್ಯೋತಿ ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ

southadka
ಸೌತಡ್ಕ ಜ್ಯೋತಿ ಜ್ಞಾನವಿಕಾಸ ಕೇಂದ್ರವನ್ನು ಡಾ.ತಾರಾ ಗಣೇಶ್ ಉದ್ಘಾಟಿಸಿದರು. ತಾಲೂಕು ಯೋಜನಾಧಿಕಾರಿ ಸುರೇಂದ್ರ, ಗ್ರಾ.ಪಂ ಸದಸ್ಯೆ ಪವಿತ್ರಾ ಮೊದಲಾದವರಿದ್ದರು.
Published on

ಕೊಕ್ಕಡ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಬೆಳ್ತಂಗಡಿ ತಾಲೂಕು ಕೊಕ್ಕಡ ವಲಯದ ಸೌತಡ್ಕ ಕಾರ್ಯ ಕ್ಷೇತ್ರದ ಹಳ್ಳಿಂಗೇರಿ ಸಭಾಭವನದಲ್ಲಿ ಜ್ಯೋತಿ ಜ್ಞಾನವಿಕಾಸ ಕೇಂದ್ರವನ್ನು ಕೊಕ್ಕಡದ ಪಂಚಮಿ ಹಿತಾಯುರ್ಧಾಮದ ಡಾ.ತಾರಾ ಗಣೇಶ್ ಉದ್ಘಾಟಿಸಿದರು.

ಮಹಿಳೆಯರ ಅಭಿವೃದ್ಧಿಗಾಗಿ ಮಾತೃಶ್ರೀ ಅಮ್ಮನವರ ಕನಸಿನ ಕಾರ್ಯಕ್ರಮವಾದ ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಮಹಿಳೆಯರು ಪ್ರಬುದ್ಧತೆ ಹೊಂದಿದೆ ಎಂದರು.

ತಾಲೂಕು ಯೋಜನಾಧಿಕಾರಿ ಸುರೇಂದ್ರ, ಜ್ಞಾನವಿಕಾಸ ಕೇಂದ್ರದ ಹುಟ್ಟು ಮತ್ತು ಧ್ಯೇಯೋದ್ದೇಶಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾ.ಪಂ ಸದಸ್ಯೆ ಪವಿತ್ರಾ, ಜನಜಾಗೃತಿ ತಾಲೂಕು ವೇದಿಕೆ ಸದಸ್ಯ ಕುಶಾಲಪ್ಪ, ಒಕ್ಕೂಟ ಅಧ್ಯಕ್ಷ ಅಬ್ದುಲ್ ರಜಾಕ್ ಉಪಸ್ಥಿತರಿದ್ದರು.

ಕೇಂದ್ರದ ಸಂಯೋಜಕಿ ಸುಜಾತಾ ಅವರಿಗೆ ಕೇಂದ್ರದ ದಾಖಲಾತಿ ಹಸ್ತಾಂತರಿಸಲಾಯಿತು. ಸೇವಾ ಪ್ರತಿನಿಧಿ ಕುಸುಮಾ ಸ್ವಾಗತಿಸಿದರು. ವಲಯ ಮೇಲ್ವಿಚಾರಕಿ ವಂದಿಸಿದರು. ಸಮನ್ವಯಾಧಿಕಾರಿ ಮಧುರಾ ವಸಂತ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net