ಸೋಲಾರ್ ಪವರ್‌ಪ್ಲಾಂಟ್ ಉದ್ಘಾಟನೆ : ಎಣ್ಮಕಜೆ ಸಾಂತ್ವನ ಬಡ್ಸ್ ಶಾಲೆಯಲ್ಲಿ ಸ್ಥಾಪನೆ

New Project (10)
Published on

ಪೆರ್ಲ: ಕೇರಳ ಸೋಷಿಯಲ್ ಸೆಕ್ಯೂರಿಟಿ ಮಿಷನ್‌ನ ಯೋಜನೆಯಂತೆ ಎಣ್ಮಕಜೆ ಗ್ರಾ.ಪಂ.ನ ಸಾಂತ್ವನ ಬಡ್ಸ್ ಶಾಲೆಯಲ್ಲಿ ಸ್ಥಾಪಿಸಿದ ಸೋಲಾರ್ ಪವರ್ ಪ್ಲಾಂಟ್‌ನ ಉದ್ಘಾಟನೆ ಶುಕ್ರವಾರ ಜರುಗಿತು. ಕಾಸರಗೋಡು ಜಿಲ್ಲಾಧಿಕಾರಿ ಇನ್ಬಾಶೇಖರ್ ಕೆ. ಉದ್ಘಾಟಿಸಿದರು. ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷೆ ರಮ್ಲ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಜಯಶ್ರೀ ಕುಲಾಲ್, ಮಂಜೇಶ್ವರ ಬ್ಲಾಕ್ ಪಂ.ಸದಸ್ಯ ಅನಿಲ್ ಕುಮಾರ್, ಪಂ.ಸದಸ್ಯರಾದ ಸರೀನಾ ಮುಸ್ತಾಫ, ಕೆಎಸ್‌ಎಸ್‌ಎಂ ಕಾರ್ಯಕ್ರಮ ಸಂಯೋಜಕ ಮುಹಮ್ಮದ್ ಫೈಸಲ್, ಜಿಲ್ಲಾ ಸಂಯೋಜಕ ಮುಹಮ್ಮದ್ ಆಶ್ರಫ್, ಮಾಜಿ ಉಪಾಧ್ಯಕ್ಷೆ ಆಯಿಷಾ ಎ.ಎ, ರಾಜಾರಾಮ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು.

ಕೆಎಸ್‌ಎಸ್‌ಎಂ ವಲಯ ನಿರ್ದೇಶಕ ಡಾ.ಸೌಮ್ಯ ಪಿ.ಸಿ. ವರದಿ ವಾಚಿಸಿದರು. ಪಂ.ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌದಾಬಿ ಹನೀಫ್ ಸ್ವಾಗತಿಸಿದರು. ಸಾಂತ್ವನ ಶಾಲಾ ಪ್ರಾಂಶುಪಾಲೆ ಮರಿಯಂಬಿ ಕೆ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net