ಪಡುವಾರಹಳ್ಳಿಯ ಜನಹಿತ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಆರು ವಾಣಿಜ್ಯ ಮಳಿಗೆಗಳ ಉದ್ಘಾಟನೆ

22
Published on

ಮೈಸೂರು: ನಗರದ ಪಡುವಾರಹಳ್ಳಿಯ ಜನಹಿತ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಿರುವ 6 ವಾಣಿಜ್ಯ ಮಳಿಗೆಗಳು ಹಾಗೂ ಆಡಳಿತ ಮಂಡಳಿಯ ಕಚೇರಿಯನ್ನು ಶನಿವಾರ ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ.ಹರೀಶ್ ಗೌಡ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, 1964ರಲ್ಲಿ ಸ್ಥಾಪನೆಯಾದ ಪಡುವಾರಹಳ್ಳಿಯ ಜನಹಿತ ವಿವಿಧೋದ್ದೇಶ ಸಹಕಾರ ಸಂಘವು ಸೇವೆ ಸಲ್ಲಿಸುತ್ತಿದೆ. ನ್ಯಾಯಬೆಲೆ ಅಂಗಡಿಯ ಮೂಲಕ ಪ್ರಾರಂಭವಾದ ಸಂಘವು ಇಂದು ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಜೊತೆಗೆ ಡಿಸಿಸಿ ಬ್ಯಾಂಕಿನಲ್ಲಿ ಸಾಲ ಪಡೆದು 6 ಮಳಿಗೆ ಕಟ್ಟಿದ್ದು ಅದನ್ನು ಬಾಡಿಗೆಯ ಮೂಲಕ ಆರ್ಥಿಕ ಪ್ರಗತಿಯತ್ತ ಸಾಗುತ್ತಿದೆ.

ಆಡಳಿತ ಮಂಡಳಿಯ ನಿರ್ದೇಶಕರು ಸಭೆಯ ಗೌರವ ಭತ್ಯೆ ಪಡೆಯದೇ ಸಂಸ್ಥೆಯ ಬೆಳವಣಿಗೆಗೆ ಕೈಜೋಡಿಸಿ ಸಹಕಾರಿ ತತ್ವದ ಯಶಸ್ವಿಗೆ ಶ್ರಮಿಸುತ್ತಿದ್ದಾರೆ ಎಂದರು.

ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ ಅವರು ಮಾತನಾಡಿದರು.

ಶಾಸಕ ಜಿ.ಟಿ.ದೇವೇಗೌಡ, ಮಾಜಿ ಶಾಸಕ ಎಲ್. ನಾಗೇಂದ್ರ, ಬಿಜೆಪಿ ಮುಖಂಡ ಕವೀಶ್ ಗೌಡ, ರಾಜ್ಯ ವಿವಿಧೋದ್ದೇಶ ಪತ್ತಿನ ಸಹಕಾರ ಮಹಾಮಂಡಳದ ಅಧ್ಯಕ್ಷ ಚಂದ್ರಶೇಖರ್, ಮಂಜು ಅವರನ್ನು ಸನ್ಮಾನಿಸಲಾಯಿತು. ಮಹದೇವಸ್ವಾಮಿ, ಸಂಘದ ಅಧ್ಯಕ್ಷ ಎಂ.ಭೈರಪ್ಪ, ಉಪಾಧ್ಯಕ್ಷ ಸಿ.ಸಂತೋಷ್, ನಿರ್ದೇಶಕರಾದ ಎಸ್.ಕೃಷ್ಣ ಕುಮಾರ್, ಟಿ.ಸೋಮು, ಈ.ಲೋಕೇಶ್ವರ, ಎನ್.ಚಂದ್ರಶೇಖರ್, ರಾಘವ್ ಎಂ.ಗೌಡ, ಬಿ.ಕುಮಾರ್, ಸೋಮಣ್ಣ, ಮಹಾಲಕ್ಷ್ಮಿ, ಲಕ್ಷಮ್ಮ, ಕೆ.ಸುರೇಶ್, ಪ್ರದೀಪ್ ನಾಯಕ, ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಜೆ.ಯೋಗೇಶ್, ಯೋಗಾನಂದ,ಪಡುವಾರಹಳ್ಳಿಯ ಎಂ ರಾಮಕೃಷ್ಣ, ಯಜಮಾನ್ ರಾಮಣ್ಣ,ರಾಮಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net