

ಮಡಿಕೇರಿ:
ಕ್ರೀಡಾಕೂಟಗಳಿಂದ ಉತ್ತಮ ಬಾಂಧವ್ಯ ಹಾಗೂ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಸೋಮವಾರಪೇಟೆ ವಿಭಾಗದ ಡಿವೈಎಸ್ಪಿ ಆರ್.ವಿ. ಗಂಗಾಧರಪ್ಪ ಹೇಳಿದರು. ಕುಶಾಲನಗರದ ಜಂಪ್ ಸ್ಮಾಶ್ ಒಳಾಂಗಣ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟಿಸಿ ಶನಿವಾರ ಮಾತನಾಡಿದರು.
ಎಲ್ಲಾ ಕ್ರೀಡೆಗಳಿಗಿಂತಲೂ ಷಟಲ್ ಬ್ಯಾಡ್ಮಿಂಟನ್ ಕ್ರೀಡೆ ಬಾಲಕರಿಂದ ವಯೋವೃದ್ದರವರೆಗೆ ಆಕರ್ಷಣೆಯಾಗುವ ಕ್ರೀಡೆಯಾಗಿದೆ. ಇದನ್ನೊಂದು ಹವ್ಯಾಸ ಮಾಡಿಕೊಳ್ಳುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು. ಕುಶಾಲನಗರ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್, ಷಟಲ್ ಬ್ಯಾಡ್ಮಿಂಟನ್ ಹಿರಿಯ ಆಟಗಾರರಾದ ನವೀನ್, ಕೆ.ಎಸ್.ಮೂರ್ತಿ, ನಿರಂಜನ್, ಸೋಮು, ಮಹೇಶ್, ಜಗ ಮಾಸ್ಟರ್ ಮೊದಲಾದವರಿದ್ದರು.
ಪಂದ್ಯಾವಳಿಯ ವಿಜೇತರಿಗೆ ಮೊದಲ ಬಹುಮಾನ 50 ಸಾವಿರ ರೂ., ಎರಡು ಮತ್ತು ಮೂರನೇ ಬಹುಮಾನವಾಗಿ ಕ್ರಮವಾಗಿ 30 ಸಾವಿರ ರೂ., ಮತ್ತು 20 ಸಾವಿರ ರೂ. ನೀಡಲಾಗುತ್ತಿದೆ ಎಂದು ಆಯೋಜಕ ಆಕಾಶ್ ಮಾಹಿತಿ ನೀಡಿದರು.