

ಮೈಸೂರು: ಶ್ರೀ ಕುಮಾರನ್ ಜ್ಯುವೆಲರ್ಸ್‌ನಿಂದ ರಾಜ್ಯದಲ್ಲೇ ಮೊದಲ ಚಿನ್ನಾಭರಣದ ಮಳಿಗೆಯನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರಾರಂಭಿಸಿದೆ.
ದಕ್ಷಿಣ ಭಾರತದ ಸಾಂಪ್ರಾದಾಯಿಕ ಆಭರಣಗಳ ತಯಾರಿ ಹಾಗೂ ಮಾರಾಟದ ಸಂಸ್ಥೆಯಾದ ಶ್ರೀ ಕುಮಾರನ್ ಜ್ಯುವೆಲರ್ಸ್ ಮಳಿಗೆ ನಗರ ಬಸ್ ನಿಲ್ದಾಣದ ಬಳಿಯ ಲಷ್ಕರ್ ಮೊಹಲ್ಲಾದ ಬಿ.ಎನ್.ರಸ್ತೆಯಲ್ಲಿ ಕಾರ್ಯಾರಂಭ ಮಾಡಿದ್ದು, ಇದು ಸಂಸ್ಥೆಯ 48ನೇ ಆಭರಣ ಮಳಿಗೆಯಾಗಿದೆ.
ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕುಮಾರನ್ ಜ್ಯುವೆಲರ್ಸ್ ಅಧ್ಯಕ್ಷ ಟಿ.ಕೆ.ಚಂದ್ರನ್ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಸೆಲ್ವಿ ಚಂದ್ರನ್, ಕೆ.ವಿನಾಯಕಂ, ಮೀನಾಕ್ಷಿ ವಿನಾಯಕಂ, ವಿ.ವಿಕ್ರಂ ನಾರಾಯಣ್, ಅಗಸ್ತ್ಯ ವಿಕ್ರಂ, ವಿನೀತ್ ಇದ್ದರು.
ವ್ಯವಸ್ಥಾಪಕ ನಿರ್ದೇಶಕರಾದ ವಿಕ್ರಮ್ ನಾರಾಯಣ್, ಅಗಸ್ತ್ಯ ವಿಕ್ರಂ ಚಿನ್ನಾಭರಣ ಮಾರಾಟಕ್ಕೆ ಚಾಲನೆ ನೀಡಿದರು.