ಉಪದೇಶಕ್ಕಿಂತ ಉಪಕಾರ ಮಿಗಿಲು

ಬಸವಕಲ್ಯಾಣ ತಾಲೂಕಿನ ಸಿರಗಾಪುರದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಶಿವಾನುಭವ ಚಿಂತನ ಕಾರ್ಯಕ್ರಮವನ್ನು ಶ್ರೀ ಡಾ.ಚನ್ನವೀರ ಶಿವಾಚಾರ್ಯ ಉದ್ಘಾಟಿಸಿದರು. ಮಲ್ಲಿನಾಥ ಹಿರೇಮಠ, ಶಿವಾ ಕಲೋಜಿ, ಮಹಾಂತಪ್ಪ ಶ್ರೀಚಂದ, ಜಿ.ಎಸ್.ಮಾಲಿಪಾಟೀಲ್, ರತಿಕಾಂತ ಕೋಹಿನೂರ, ಶರಣಬಸಪ್ಪ ಮುಡಬಿ, ಕಾಶಪ್ಪ ದೇಗಾಂವ ಇತರರಿದ್ದರು.
ಬಸವಕಲ್ಯಾಣ ತಾಲೂಕಿನ ಸಿರಗಾಪುರದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಶಿವಾನುಭವ ಚಿಂತನ ಕಾರ್ಯಕ್ರಮವನ್ನು ಶ್ರೀ ಡಾ.ಚನ್ನವೀರ ಶಿವಾಚಾರ್ಯ ಉದ್ಘಾಟಿಸಿದರು. ಮಲ್ಲಿನಾಥ ಹಿರೇಮಠ, ಶಿವಾ ಕಲೋಜಿ, ಮಹಾಂತಪ್ಪ ಶ್ರೀಚಂದ, ಜಿ.ಎಸ್.ಮಾಲಿಪಾಟೀಲ್, ರತಿಕಾಂತ ಕೋಹಿನೂರ, ಶರಣಬಸಪ್ಪ ಮುಡಬಿ, ಕಾಶಪ್ಪ ದೇಗಾಂವ ಇತರರಿದ್ದರು.
Published on

ಬಸವಕಲ್ಯಾಣ: ಬಡವ, ನಿರ್ಗತಿಕ, ವಯೋವೃದ್ಧರಿಗೆ ಮಾಡಿದ ಒಂದು ಉಪಕಾರ ನೂರು ಉಪದೇಶಗಳಿಗಿಂತಲೂ ಮಿಗಿಲು. ಕೋಟಿ ಕೋಟಿ ಧನ ಸಂಪತ್ತಿದ್ದರೂ ದಾಸೋಹವಿಲ್ಲದ ಬದುಕು ನಿರರ್ಥಕ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯ ನುಡಿದರು.

ಸಿರಗಾಪುರ ಗ್ರಾಮದಲ್ಲಿ ಶ್ರೀ ಮಹಾದೇವ ಜಾತ್ರೋತ್ಸವ ನಿಮಿತ್ತ ಭಾನುವಾರ ಸಂಜೆ ಏರ್ಪಡಿಸಿದ್ದ ಶಿವಾನುಭವ ಚಿಂತನ ಕಾರ್ಯಕ್ರಮ ಉದ್ಘಾಟಿಸಿದ ಅವರು, ನಮ್ಮ ಆದಾಯದ ಶೇ.೧೦ರಷ್ಟಾದರೂ ಯಾವುದೇ ಫಲಾಪೇಕ್ಷೆ ಇಲ್ಲದೆ ದಾನ, ಧರ್ಮ, ದಾಸೋಹದಂತಹ ಸತ್ಕಾರ್ಯಗಳಿಗೆ ನಿಸ್ವಾರ್ಥ ಭಾವದಿಂದ ಬಳಸಿದ್ದೇ ಆದಲ್ಲಿ ಬದುಕು ಮಹಾದೇವನ ಪ್ರಿಯವಾಗಿ ಅಮರ ಸಿರಿ ಲಭಿಸುತ್ತದೆ ಎಂದರು.

ನಿರ್ಮಲ ಮನಸ್ಸಿನ ಪ್ರಣತಿಯಲ್ಲಿ ದೃಢ ಸಂಕಲ್ಪದ ತೈಲವ ಸುರಿದು ಅಚಲ ಭಕ್ತಿಯ ನಾಮಸ್ಮರಣೆ ಇದ್ದೊಡೆ ಸಾಕ್ಷಾತ್ ಮಹಾದೇವನೇ ಜ್ಯೋತಿ ಪ್ರಜ್ವಲಿಸಿ ಬದುಕು ನಂದಾದೀಪವಾಗಿ ಬೆಳಗಿಸುವುದರಲ್ಲಿ ಸಂಶಯವಿಲ್ಲ. ಅಸಹಾಯಕರಿಗೆ ಸಹಾಯಹಸ್ತ ಚಾಚುವುದೇ ನಿಜವಾದ ಮಹಾದೇವನ ಪೂಜೆ ಎಂಬುದನ್ನು ಆಳವಾಗಿ ಗ್ರಹಿಸಿಕೊಂಡು, ಹೃದಯವೈಶಾಲ್ಯ ಬೆಳಸಿಕೊಂಡು ಸಹಬಾಳ್ವೆಯಿಂದ ಬದುಕುವುದರಲ್ಲಿ ಸಿರಗಾಪುರದ ಸಿರಿ ಕಾಣಲು ಸಾಧ್ಯ ಎಂದು ಹೇಳಿದರು.


ಕಲಬುರಗಿ ಮಹಾನಗರ ಪಾಲಿಕೆ ಆಧಿಕಾರಿ ಸಾವಿತ್ರಿ ಶರಣು ಸಲಗರ, ಯುವ ಮುಖಂಡ ರತಿಕಾಂತ ಕೋಹಿನೂರ ಮಾತನಾಡಿದರು. ಪ್ರಮುಖರಾದ ರಾಜಕುಮಾರ ಬಿರಾದಾರ, ಮಲ್ಲಿನಾಥ ಹಿರೇಮಠ, ಸಾವಿತ್ರಿ ರಾಜಕುಮಾರ ಯಾಚೆ, ಶರಣಬಸಪ್ಪ ಮುಡಬಿ, ಶಿವಾ ಕಲೋಜಿ, ಜಿ.ಎಸ್. ಮಾಲಿಪಾಟೀಲ್, ಕಾಶಪ್ಪ ದೇಗಾಂವ, ಬಸವರಾಜ ಯಾಚೆ, ಮಾಲ್ಲಿಕಾರ್ಜುನ ಗಿಲ್ಕೆ, ಅಪ್ಪಣ್ಣ ಜನವಾಡ, ವಿಠ್ಠಲ್ ಹೂಗಾರ, ಮಾರುತಿ ಸಜ್ಜನ್ ಇತರರಿದ್ದರು.

ರಾಮಲಿಂಗ ಭೂತೆ ಸ್ವಾಗತಿಸಿದರು. ಸಂತೋಷ ಯಾಚೆ ನಿರೂಪಣೆ ಮಾಡಿದರು. ನಂದಿತಾ ಮುಗಳೆ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು. ಇದಕ್ಕೂ ಮುನ್ನ ಹಾರಕೂಡ ಶ್ರೀಗಳನ್ನು ದೀಪಾಲಂಕೃತ ಸಾರೋಟಿನಲ್ಲಿ ಗ್ರಾಮ ಹೊರವಲಯದಿಂದ ಮುಖ್ಯರಸ್ತೆ ಮೂಲಕ ವೈಭವದ ಮೆರವಣಿಗೆಯೊಂದಿಗೆ ಮಹಾದೇವ ಮಂದಿರಕ್ಕೆ ಕರೆತರಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net