

ಕುಂಬಳೆ: ಶಿವಳ್ಳಿ ಬ್ರಾಹ್ಮಣ ಸಭಾ ಕಾಸರಗೋಡು ವಲಯ ಸಮಿತಿಯ ಸೀತಾಂಗೋಳಿಯಲ್ಲಿ ನಿರ್ಮಿಸಿದ ಶಿವಳ್ಳಿ ಭವನವನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಇತ್ತೀಚೆಗೆ ಉದ್ಘಾಟಿಸಿದರು.
ಚಕ್ರಪಾಣಿ ದೇವಪೂಜಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಉಳಿಯ ವಿಷ್ಣು ಆಸ್ರ, ಕೇರಳ ಉಡುಪಿ ಮಾಧ್ವ ಬ್ರಾಹ್ಮಣ ಸಭಾ ಕಾರ್ಯಾಧ್ಯಕ್ಷ ವಿಶ್ರುತ್, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ರಮಾದೇವಿ, ಸ್ವಯಂಪ್ರಭಾ, ವೀಣಾ ಕಡಮಣ್ಣಾಯ, ಶಿವಳ್ಳಿ ಬ್ರಾಹ್ಮಣ ಸಭಾ ಸ್ಥಾಪಕ ಅಧ್ಯಕ್ಷ ಬಿ.ವಿಷ್ಣು ಕಕ್ಕಿಲ್ಲಾಯ, ಸ್ಥಾಪಕ ಕಾರ್ಯದರ್ಶಿ ರತನ್ ಕುಮಾರ್ ಕಾಮಡ, ರಕ್ಷಾಧಿಕಾರಿಗಳಾದ ವಿಷ್ಣು ಭಟ್ ಮಧೂರು ಹಾಗೂ ಸೀತಾರಾಮ ಕುಂಜತ್ತಾಯ, ಶಿವಳ್ಳಿ ಬ್ರಾಹ್ಮಣ ಸಭಾದ ಕೇಂದ್ರ ಸಮಿತಿ ಕಾರ್ಯದರ್ಶಿ ಚೇತನ್ ರಾಮ್ ನೂರಿತ್ತಾಯ, ಜತೆ ಕಾರ್ಯದರ್ಶಿ ಮುರಳೀಧರ ಕಡಮಣ್ಣಾಯ, ಕೋಶಾಧಿಕಾರಿ ಸೀಮಾ ಬಿ, ಧಾರ್ಮಿಕ ಮುಂದಾಳು ಮಂಜುನಾಥ ಆಳ್ವ, ಪದ್ಮನಾಭ ರಾವ್ ಶುಭ ಹಾರೈಸಿದರು.
ಶ್ರೀನಿವಾಸ ಅಮ್ಮಣ್ಣಾಯ, ಪುತ್ತಿಗೆ ಪಂಚಾಯಿತಿ ಉಪಾಧ್ಯಕ್ಷೆ ಜಯಂತಿ, ಸ್ಥಾಯಿ ಸಮಿತಿ ಅಧ್ಯಕ್ಷ ಪಾಲಾಕ್ಷ ರೈ, ಸದಸ್ಯರಾದ ಕಾವ್ಯಶ್ರೀ, ಅನಿತಾಶ್ರೀ, ಜನಾರ್ದನ ಪೂಜಾರಿ, ಯುವಶಕ್ತಿ ಘಟಕದ ಪ್ರದೀಪ ಅಡಿಗ, ಕಿಶೋರ್ ಕಲ್ಲೂರಾಯ, ವಾಸುದೇವ ಕೊಳತ್ತಾಯ, ವಿಘ್ನರಾಜ, ಜನಾರ್ದನ ಎ.ಪಿ, ನಮಿತಾ ವಸಂತ್, ರಂಜನಿ, ಮಮತಾ ಚಕ್ರಪಾಣಿ, ಸುಮನಾ ಅಡಿಗ, ಕೀರ್ತಿ ರಂಜನ್, ಸುಕನ್ಯಾ ಉಳಿಯತ್ತಾಯ ಇದ್ದರು.
ಸೀತಾರಾಮ ಕಡಮಣ್ಣಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಭಾರತಿ ಪಟ್ಟೆರಿ ಪ್ರಾರ್ಥನೆ ಹಾಡಿದರು. ವಸಂತ ಕುಮಾರ್ ಸ್ವಾಗತಿಸಿದರು. ಸತ್ಯನಾರಾಯಣ ತಂತ್ರಿ ಕಾರ್ಯಕ್ರಮ ನಿರ್ವಹಿಸಿದರು. ಸುಮಂಗಲ ತಂತ್ರಿ ವಂದಿಸಿದರು. ವಿವಿಧ ಕಲಾ ಕಾರ್ಯಕ್ರಮಗಳು ನಡೆದವು.
ಧನಸಹಾಯ ಹಸ್ತಾಂತರ
ರಾಧಾಕೃಷ್ಣ ರಾವ್ ಶಾಂತಕುಮಾರಿ ಟ್ರಸ್ಟ್ ವತಿಯಿಂದ ಗೋಪಾಲಕೃಷ್ಣ ಆಯಂಬಾರೆ ನೀಡಿದ ಧನ ಸಹಾಯವನ್ನು ಎಡನೀರು ಶ್ರೀ ಹಸ್ತಾಂತರಿಸಿದರು. ಜಿಲ್ಲಾ ಕ್ರೀಡಾ ಹಾಗೂ ಸಾಂಸ್ಕೃತಿಕ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಕಟ್ಟಡ ನಿರ್ಮಾಣದ ರೂವಾರಿ ರಾಜನಾರಾಯಣ ಕೆ.ಬಿ.ದಂಪತಿಯನ್ನು, ಇಂಜಿನಿಯರ್ ಶಿವಶಂಕರ್, ವರ್ಷಾ ಅವರನ್ನು ಅಭಿನಂದಿಸಲಾಯಿತು.