ಏ.೨೭ ರಿಂದ ಶಿಲಾ ದೇವಸ್ಥಾನ ಉದ್ಘಾಟನೆ

NAGENDRAPPA MATAMARI
NAGENDRAPPA MATAMARI
Published on

ರಾಯಚೂರು ತಾಲೂಕಿನ ಮಟಮಾರಿ ಗ್ರಾಮದಲ್ಲಿ ಶ್ರೀಮಲ್ಲಿಕಾರ್ಜುನ ಶಿಲಾ ದೇವಸ್ಥಾನ ಉದ್ಘಾಟನೆ ಹಾಗೂ ಶಿವಲಿಂಗ, ಗರುಢ ಸ್ತಂಭ ಪ್ರತಿಷ್ಠಾಪನೆ ಕಾರ್ಯಕ್ರಮವು ಏ.೨೭ ಮತ್ತು ೨೮ ರಂದು ಆಯೋಜಿಸಲಾಗಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ನಾಗೇಂದ್ರಪ್ಪ ಮಟಮಾರಿ ಹೇಳಿದರು.

ನಗರದ ಪತ್ರಿಕಾ ಬವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, , ಏ.೨೭ ರಂದು ನೂತನವಾಗಿ ನಿರ್ಮಿಸಲಾಗಿರುವ ಶಿವಲಿಂಗ, ಶಿಲಾ ಮೂರ್ತಿಗಳ ಮೆರವಣಿಗೆ ಮಂಗಳವಾಧ್ಯಗಳೊAದಿಗೆ ಪೂರ್ಣ ಕುಂಭ ಕಳಸದೊಂದಿಗೆ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದವರೆಗೆ ಮೆರವಣಿಗೆ ನಡೆಯಲಿದೆ. ನಂತರ ಜಲಾದಿವಸ, ಕ್ಷೀರಾದಿವಸ ಧಾನ್ಯದಿವಾಸ ಸೇರಿ ವಿವಿಧ ಪೂಜಾ ಕಾರ್ಯಗಳು ನಡೆಯಲಿವೆ.

ಏ.೨೮ ರಂದು ನೂತನ ಶಿಲಾ ಮೂರ್ತಿಗೆ ರುದ್ರಾಭಿಷೇಕ, ಅಷ್ಟೋತ್ತರ ನಾಮವಳಿ, ಪ್ರಾಣ ಪ್ರತಿಷ್ಠಾಪನೆ, ರುದ್ರ ಹೋಮಕಾರ್ಯಕ್ರಮಗಳು ನಡೆಯಲಿವೆ. ನಂತರ ನಡೆಯುವ ಕಾರ್ಯಕ್ರಮವನ್ನು ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಉದ್ಘಾಟಿಸಲಿದ್ದಾರೆ. ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ, ಶಾಸಕ ಡಾ.ಶಿವರಾಜ ಪಾಟೀಲ್, ಕೆ.ವಿರೂಪಾಕ್ಷಪ್ಪ, ಮಂತ್ರಾಲಯ ಶಾಸಕ ಬಾಲನಾಗಿರೆಡ್ಡಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ ಎಂದರು.

ಈ ಸಂದರ್ಬದಲ್ಲಿ ಬಿ.ರಾಮಣ್ಣ, ಕೆ. ನಾಗರಾಜ, ಕೆ. ಬಡೇಪ್ಪ, ತಾಯಣ್ಣ, ಡಿಸಿ ತಾಯಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net