ಸೇವಾಸಂಗಮ ಶಿಶುಮಂದಿರ ಆರಂಭೋತ್ಸವ

shishumandira
ಇಲ್ಲಿನ ಕೋಟದ ಸೇವಾಸಂಗಮ ಶಿಶುಮಂದಿರ ಇದರ ಪ್ರಾರಂಭೋತ್ಸವ ಕಾರ್ಯಕ್ರಮ ಇತ್ತೀಚೆಗೆ ಜರುಗಿತು
Published on

ಕೋಟ: ಇಲ್ಲಿನ ಸೇವಾಸಂಗಮ ಶಿಶುಮಂದಿರದ ಪ್ರಾರಂಭೋತ್ಸವ ಇತ್ತೀಚೆಗೆ ಜರುಗಿತು. ಪಾಲಕರು ಮಕ್ಕಳನ್ನು ಶಿಶುಮಂದಿರಕ್ಕೆ ಕರೆತಂದಿದ್ದು, ಈ ವೇಳೆ ಆರತಿ ಬೆಳಗಿ ಮಕ್ಕಳನ್ನು ಬರಮಾಡಿಕೊಳ್ಳಲಾಯಿತು.

ಶಿಶುಮಂದಿರ ಸಮಿತಿ ಅಧ್ಯಕ್ಷೆ ನಾಗಲಕ್ಷ್ಮೀ ಹೆಗ್ಡೆ ಶುಭಹಾರೈಸಿದರು. ಸಮಿತಿಯ ಪದಾಧಿಕಾರಿಗಳಾದ ಸುಷ್ಮಾ ದಯಾನಂದ್ ಹೊಳ್ಳ, ಸುಶೀಲಾ ಸೋಮಶೇಖರ್, ವಸುಧಾ ಪ್ರಭು, ವ್ಯವಸ್ಥಾಪಕಿ ಭಾಗ್ಯ ವಾದಿರಾಜ್, ಅಮೃತ್ ಜೋಗಿ, ಮಾತಾಜಿ, ಸಹಾಯಕಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net