ಹಿರಿಯ ನಾಗರಿಕರ ನೆರವಿಗೆ ಜಿಲ್ಲಾಡಳಿತ: ಡಿಸಿ ಡಾ.ಎಚ್.ಎನ್.ಗೋಪಾಲಕೃಷ್ಣ ಭರವಸೆ

1 (3)
Published on

ಮಂಡ್ಯ: ಸರ್ಕಾರಿ ಇಲಾಖೆಯಿಂದ ಹಿರಿಯ ನಾಗಕರಿಗೆ ಆಗಬೇಕಿರುವ ಕೆಲಸ ಕಾರ್ಯಗಳನ್ನು ಶೀಘ್ರವಾಗಿ ಮಾಡಿಕೊಡಲು ಸೂಚನೆ ನೀಡುತ್ತೇನೆ. ಅಗತ್ಯ ಬಿದ್ದಲ್ಲಿ ಜಿಲ್ಲಾಡಳಿತ ನೆರವಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ, ಸೌಲಭ್ಯ ಸದುಪಯೋಗಪಡಿಸಿಕೊಂಡು ನೆಮ್ಮದಿಯ ಬದುಕು ನಡೆಸಿ ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಟ್ಟಡ ಸಮೀಪ ಜಿಲ್ಲಾ ಹಿರಿಯ ನಾಗರಿಕರ ಕ್ಷೇಮಾಭಿವೃದ್ದಿ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಸಂಘಟಿತರಾಗಿದ್ದಲಿ ಶಕ್ತಿ ಬರುತ್ತದೆ. ಮಾತ್ರವಲ್ಲದೆ ಸೇವಾ ಚಟುವಟಿಕೆ ನಡೆಸಲು ಪ್ರೇರಣಿಯಾಗಿರುತ್ತದೆ. ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಿಕ್ಕೆ ಸಂಘಟಿತರಾಗಿ ಸಂಘ ಸಂಸ್ಥೆಗಳನ್ನು ರಚಿಸಿಕೊಂಡಿರುತ್ತಾರೆ. ಹಿರಿಯ ನಾಗರಿಕರೆಂದ ಮೇಲೆ ಸಾಕಷ್ಟು ಸಮಸ್ಯೆಗಳು ಬರುತ್ತವೆ. ಪಿಂಚಿಣಿ, ಆರೋಗ್ಯ ಭತ್ಯೆಗೆ ತೊಂದರೆಯಾಗಿರುವುದನ್ನು ಪರಿಹಾರ ಕಂಡುಕೊಳ್ಳಲು ಕ್ಷೇಮ ಸಂಘಗಗಳಿಂದ ನೆರವು ಪಡೆಯುವುದು ಅಗತ್ಯ ಎಂದು ಸಲಹೆ ನೀಡಿದರು.

ಸಂಘದ ಅಧ್ಯಕ್ಷ ಡಿ.ಎಂ.ಚಿಕ್ಕುಚ್ಚಯ್ಯ, ಉಪಾಧ್ಯಕ್ಷರಾದ ಎಂ.ಎಸ್.ನಾಗರಾಜು, ಶ್ರೀನಿವಾಸ್, ಕಾರ್ಯದರ್ಶಿ ಚಿಕ್ಕಸಿದ್ದೇಗೌಡ, ಸಹಕಾರ್ಯದರ್ಶಿ ನಿಂಗೇಗೌಡ, ಖಜಾಂಚಿ ಪುಟ್ಟಸ್ವಾಮಿ, ಸಂಘಟನಾ ಕಾರ್ಯದರ್ಶಿ ಚಿಕ್ಕನಾಗೇಗೌಡ, ಪದಾಧಿಕಾರಿಗಳಾದ ಕೃಷ್ಣೇಗೌಡ, ಸಿದ್ದೇಗೌಡ, ಕೃಷ್ಣಪ್ಪ, ಶಿವಲಿಂಗಯ್ಯ, ಮಾದೇಗೌಡ, ನಾಗರಾಜು, ಚಿಕ್ಕಚನ್ನಯ್ಯ, ಸತ್ಯಾನಂದಸ್ವಾಮಿ, ಡಾ.ಮರೀಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net