

ಪುತ್ತೂರು ಗ್ರಾಮಾಂತರ: ಸ್ವಚ್ಛತೆ ಕಾಪಾಡುವುದು ಕೇವಲ ಗ್ರಾಪಂ ಕರ್ತವ್ಯ ಮಾತ್ರವಲ್ಲ, ಪ್ರತಿಯೊಬ್ಬ ಗ್ರಾಮಸ್ಥ ಕೂಡ ನಮ್ಮ ಗ್ರಾಮ ಸ್ವಚ್ಛವಾಗಿರಬೇಕು ಎಂಬ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಒಳಮೊಗ್ರು ಗ್ರಾ.ಪಂ. ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಹೇಳಿದರು.
ಒಳಮೊಗ್ರು ಗ್ರಾಮದ ಕುಂಬ್ರ ವರ್ತಕರ ಸಂಘದ 20ನೇ ವರ್ಷಾಚರಣೆ ಹಾಗೂ ‘ಪೊರ್ಲುದ ಕುಂಬ್ರ’ ಸೆಲ್ಫಿ ಪಾಯಿಂಟ್ ಉದ್ಘಾಟಿಸಿ ಮಾತನಾಡಿದರು.
ಪುತ್ತೂರು ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ಅಧ್ಯಕ್ಷ ವಾಮನ ಪೈ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಝೇವಿಯರ್ ಡಿಸೋಜ, ಮೆಸ್ಕಾಂ ಜೂನಿಯರ್ ಇಂಜಿನಿಯರ್ ರವೀಂದ್ರ, ಸಂಪ್ಯ ಅಕ್ಷಯ ಕಾಲೇಜಿನ ಸಂಚಾಲಕ ಜಯಂತ ನಡುಬೈಲು, ಸೆಲ್ಫಿ ಪಾಯಿಂಟ್ ಕೊಡುಗೆ ನೀಡಿದ ಉದ್ಯಮಿ ಮಹಮ್ಮದ್ ಸಾದಿಕ್ ಹಾಜಿ, ಉದ್ಯಮಿ ಮೋಹನದಾಸ ರೈ ಕುಂಬ್ರ, ಸಂಘದ ಗೌರವ ಸಲಹೆಗಾರರಾದ ಕುಂಬ್ರ ದುರ್ಗಾಪ್ರಸಾದ್ ರೈ, ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕ, ಚಂದ್ರಕಾಂತ ಶಾಂತಿವನ, ಸಿಶೇ ಕಜೆಮಾರ್ ಮಾತನಾಡಿದರು.
ಕೆದಂಬಾಡಿ ಗ್ರಾಪಂ ಅಧ್ಯಕ್ಷೆ ಸುಜಾತ ಮುಳಿಗದ್ದೆ, ಒಳಮೊಗ್ರು ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಉದ್ಯಮಿ ಯೂಸುಫ್ ಹಾಜಿ ಕೈಕಾರ ಉಪಸ್ಥಿತರಿದ್ದರು. ವಂಶಿ ಬೊಳ್ಳಾಡಿ ಪ್ರಾರ್ಥಿಸಿದರು. ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ್ ರೈ ಕೊಪ್ಪಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಸಂಶುದ್ದೀನ್ ಎ.ಆರ್. ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಭವ್ಯಾ ರೈ ವಂದಿಸಿದರು. ಶಿಕ್ಷಕರಾದ ಬಾಲಕೃಷ್ಣ ಪೊರ್ದಾಲ್ ಮತ್ತು ವಿಶ್ವನಾಥ ಗೌಡ ಬೊಳ್ಳಾಡಿ ಕಾರ್ಯಕ್ರಮ ನಿರೂಪಿಸಿದರು.
ಪ್ರತಿಭೆಗಳಿಗೆ ಗೌರವಾರ್ಪಣೆ
ವರ್ತಕರ ಸಂಘದ ಗೌರವ ಸಲಹೆಗಾರರಾದ ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕ, ಕುಂಬ್ರ ದುರ್ಗಾಪ್ರಸಾದ್ ರೈ, ಚಂದ್ರಕಾಂತ ಶಾಂತಿವನ, ಮಹಮ್ಮದ್ ಸಾದಿಕ್ ಹಾಜಿ, ಪತ್ರಕರ್ತ ಸಿಶೇ ಕಜೆಮಾರ್, ಶಿಕ್ಷಣ ಕ್ಷೇತ್ರದ ಪ್ರತಿಭೆಗಳಾದ ಸನ್ನಿಧಿ ಕುರಿಕ್ಕಾರ, ಮೊಹಮ್ಮದ್ ಹಾಶೀರ್, ಫಾತಿಮತುಲ್ ಬುಸೈರ, ಎಸ್.ಪಿ.ಮುಹಮ್ಮದ್ ಹಾಶಿರ್, ಫಾತಿಮತ್ ಶಿಫಾ, ಕಾವ್ಯಶ್ರೀ, ತನುಶೀ, ಅಕ್ಷಯ್, ಅಭೀಷ್ ರೈ ಮಂದಾರ ಹಾಗೂ ಒಳಮೊಗ್ರು, ಕೆದಂಬಾಡಿ ಮತ್ತು ಅರಿಯಡ್ಕ ಪಂಚಾಯಿತಿಯ ಸ್ವಚ್ಛ ವಾಹಿನಿಯ ಸ್ವಚ್ಛತಾ ಸೇನಾನಿಗಳನ್ನು ಸನ್ಮಾನಿಸಲಾಯಿತು.