ಸ್ವಯಂಸ್ಫೂರ್ತಿ ಕೌಶಲ ಕೇಂದ್ರ ಉದ್ಘಾಟನೆ

daddinaguli
ಸ್ವಯಂಸ್ಫೂರ್ತಿ ಕೌಶಲ ಕೇಂದ್ರವನ್ನು ನಾಗರಾಜ್ ಶೆಟ್ಟಿ ಉದ್ಘಾಟಿಸಿದರು. ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ್ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ಕೆ.ನಾಯ್ಕ ಮೊದಲಾದವರಿದ್ದರು
Published on

ಬೈಂದೂರು: ಮುದೂರು ದುಡ್ಡಿನಗುಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮೃದ್ಧ ಬೈಂದೂರು ಪರಿಕಲ್ಪನೆ 300 ಟ್ರೀಸ್ ಯೋಜನೆಯಡಿ ಬೆಂಗಳೂರು ಸ್ವಯಂ ಸ್ಫೂರ್ತಿ ಫೌಂಡೇಶನ್ ವತಿಯಿಂದ ಸ್ವಯಂಸ್ಫೂರ್ತಿ ಕೌಶಲ ಕೇಂದ್ರವನ್ನು ಫೌಂಡೇಶನ್ ಸ್ಥಾಪಕ ನಾಗರಾಜ್ ಶೆಟ್ಟಿ ಉದ್ಘಾಟಿಸಿದರು.
ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ್ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ಕೆ.ನಾಯ್ಕ, 300 ಟ್ರೀಸ್ ಯೋಜನೆ ಟೀಮ್ ಲೀಡರ್ ಶೋಧನ್ ಮಲ್ಪೆ, ಸಮನ್ವಯ ಅಧಿಕಾರಿ ಮಂಜುನಾಥ ನಾಯ್ಕ, ಗ್ರಾಪಂ ಸದಸ್ಯರಾದ ಲಕ್ಷ್ಮಣ ಶೆಟ್ಟಿ, ಸೂಲ್ಯ ಬೋವಿ, ವಂಡ್ಸೆ ಕ್ಲಸ್ಟರ್ ಸಿಆರ್‌ಪಿ ನಾಗರಾಜ್ ಶೆಟ್ಟಿ, ಹಳೇ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸಂತೋಷ ನಾಯ್ಕ, ವಿಕಲಚೇತನ ಪ್ರತಿನಿಧಿ ರಾಜು ಪೂಜಾರಿ, ಮುಖ್ಯಶಿಕ್ಷಕಿ ಸವಿತಾ, ಅತ್ತಿಕಾರ್ ರಾಮ ಶೆಟ್ಟಿ ಉಪಸ್ಥಿತರಿದ್ದರು. ಗೌರವ ಶಿಕ್ಷಕಿ ಪೂರ್ಣಿಮಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net