

ಮಂಗಳೂರು: ಮಂಗಳೂರು ನಗರದ ಬಿಕರ್ನಕಟ್ಟೆಯಲ್ಲಿರುವ ಎಸ್‌ಸಿಎಸ್ ಕೋಚಿಂಗ್ ಅಕಾಡೆಮಿಯು ಸೋಮವಾರ ಉದ್ಘಾಟನೆಗೊಂಡಿತು.
ಎಸ್‌ಸಿಎಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ರಜನೀಶ್ ಸೊರಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನುರಿತ ಅನುಭವೀ ಉಪನ್ಯಾಸಕರಿಂದ ಕೋಚಿಂಗ್‌ನ ಅನಿವಾರ್ಯತೆಯಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ತೀವ್ರ ಪೈಪೋಟಿ ನಡೆಸುವ ಅನಿವಾರ್ಯತೆಯಿದ್ದು, ಗುಣಮಟ್ಟದ ಶಿಕ್ಷಣ ದೊರೆತರೆ ಮಾತ್ರ ಯಶಸ್ಸು ಪಡೆಯಲು ಸಾಧ್ಯ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸಮರ್ಥ ಮಾರ್ಗದರ್ಶನ ನೀಡಬೇಕಾದ ಶಿಕ್ಷಕರು ವಿದ್ಯಾರ್ಥಿಗಳಂತೆಯೆ ಕಲಿಯುವಿಕೆಯಲ್ಲಿ ತೊಡಗಿಕೊಳ್ಳಬೇಕಾಗಿದೆ ಎಂದರು.
ಎಸ್‌ಸಿಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಾರಾಮ್ ರಾವ್ ಮಾತನಾಡಿ, ಇಲ್ಲಿ 8, 9, 10 ಪ್ರಥಮ ಪಿಯು ಹಾಗೂ ದ್ವಿತೀಯ ಪಿಯು ಅಲ್ಲದೆ ನೀಟ್, ಜೆ.ಇ.ಇ ಹಾಗೂ ಕೆ-ಸಿಇಟಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಅಧಿಕಾರಿ ಯು.ಕೆ.ಖಾಲಿದ್, ಮತ್ತಿತ್ತರರು ಉಪಸ್ಥಿತರಿದ್ದರು.