ರೇಚಿಕೊಪ್ಪದಲ್ಲಿ ಶಾಲಾ ಶೌಚಗೃಹ ಉದ್ಘಾಟನೆ

7anr 9
Published on

ಆಯನೂರು: ಮಂಡಘಟ್ಟ ಗ್ರಾಪಂ ವ್ಯಾಪ್ತಿಯ ರೇಚಿಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಸುಸಜ್ಜಿತ ಶೌಚಗೃಹನ್ನು ಬುಧವಾರ ಉದ್ಘಾಟಿಸಲಾಯಿತು. ಶಿಕ್ಷಣ ಇಲಾಖೆ ಮತ್ತು ಮಂಡಘಟ್ಟ ಗ್ರಾಪಂ ಅನುದಾನದಲ್ಲಿ ಒಟ್ಟು 5.20 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಗ್ರಾಪಂ ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷೆ ರಶ್ಮಿ, ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮಣ್, ಉಪಾಧ್ಯಕ್ಷೆ ಶಾಂತಕುಮಾರಿ, ಸದಸ್ಯರಾದ ಗಿರಿಜಮ್ಮ ,ಮಂಜಾಭೋವಿ, ಪಿಡಿಒ ಮಂಜುನಾಥ್, ಗ್ರಾಮಸ್ಥರಾದ ಕೇಶವ, ನಾರಾಯಣ, ಗಿಡ್ಡಪ್ಪ, ಪ್ರಶಾಂತ್, ಲೋಕೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net