ಸರ್ವೋದಯ ದಿನಾಚರಣೆ ಉದ್ಘಾಟನೆ

Oplus_131072
Oplus_131072
Published on

ನಂಜನಗೂಡು: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದಿಂದ ಮಂಗಳವಾರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಕೆ. ಕೆಂಪೇಗೌಡ ಅವರು ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸರ್ವೋದಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದರು.

ಗಾಂಧಿ ಅಧ್ಯಯನ ಕೇಂದ್ರದ ಸಂಚಾಲಕ ಡಾ. ಮಹದೇವಪ್ರಸಾದ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಕನ್ನಡ ವಿಭಾಗದ ಮುಖ್ಯಸ್ಧ ಡಾ.ಎಂ. ಜಯಶಂಕರ ಅವರು, ಸರ್ವೋದಯ ದಿನದ ಮಹತ್ವ ಹಾಗೂ ಗಾಂಧೀಜಿ ಅವರ ಚಿಂತನೆಗಳ ಪ್ರಸ್ತುತತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಸತ್ಯ, ಅಹಿಂಸೆ ವಿಚಾರಗಳ ಮೂಲಕ ಗಾಂಧೀಜಿ ಅವರ ರಾಜಕೀಯ ಚಿಂತನೆ, ಸಾಮಾಜಿಕ ಚಿಂತನೆ ಮತ್ತು ನೈತಿಕ ಚಿಂತನೆ ಬಗ್ಗೆ ಬೆಳಕು ಚೆಲ್ಲಿದರು. ಗಾಂಧಿಜೀ ಅವರ ಪ್ರಭಾವಕ್ಕೆ ಒಳಗಾದ ರಾಮ್ ಮನೋಹರ ಲೋಹಿಯ, ಶಿವರಾಂ ಕಾರಂತ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಇನ್ನಿತರ ಸಾಹಿತಿಗಳು ಗಾಂಧೀಜಿ ಅವರ ಜತೆಗಿನ ಒಡನಾಟದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ.ಜಿ.ಎಂ. ಸೌಮ್ಯಾ, ಕೃಷ್ಣೇಗೌಡ, ಇತರ ಅಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net